ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್) ವತಿಯಿಂದ 2021-22ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರೂಪಿಸಲಾದ ಸಾಮರ್ಥ್ಯಕ್ಕನುಗುಣವಾದ ಸಾಲ ಯೋಜನೆ(ಪಿಎಲ್ಪಿ)ಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್)ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಪಿ.ಮನೋಹರರೆಡ್ಡಿ ಅವರು ಮಾತನಾಡಿ ಸಾಮರ್ಥ್ಯಕ್ಕನುಗುಣವಾದ ಸಾಲ ಯೋಜನೆ(ಪಿಎಲ್ಪಿ)ಯು ಜಿಲ್ಲೆಯಲ್ಲಿ ಸ್ಥಳೀಯವಾಗಿ ಅಸ್ತಿತ್ವದಲ್ಲಿರುವ ಮೂಲ ಉದ್ದೇಶಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಮೂಲ ಸೌಕರ್ಯಗಳ ಆಧಾರದ ಮೇಲೆ ಭೌತಿಕ ಸಾಮರ್ಥ್ಯಕ್ಕನುಗುಣವಾದ ದೀರ್ಘ ಕಾಲಾವಧಿಯ ಲಭ್ಯತೆಗೆ ಪೂರಕವಾಗುವಂತೆ ಹಾಗೂ ಮಾರುಕಟ್ಟೆಯ ಸೌಕರ್ಯಗಳ ಗಮನದಲ್ಲಿಟ್ಟುಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಕ್ಷಿಪ್ತ ವಿಧಾನಗಳನ್ನಾಧರಿಸಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಆದ್ಯತೆ ವಲಯದ ಸಾಮರ್ಥ್ಯಕ್ಕನುಗುಣವಾಗಿ ಸಾಲ ಯೋಜನೆಯನ್ನು 2021-22ನೇ ಸಾಲಿಗೆ ರೂ.3,401 ಕೋಟಿಗಳಿಗೆ ನಿಗದಿಪಡಿಸಲಾಗಿದೆ. ಇದು ಕಳೆದ ವರ್ಷದ(2020-21ನೇ ಸಾಲಿನ) ಯೋಜನೆಗಿಂತ ಶೇ.17.50% ರಷ್ಟು ಹೆಚ್ಚಿನ ಪ್ರಮಾಣದಲ್ಲಿದೆ. ಪ್ರಮುಖ ಕ್ಷೇತ್ರಗಳಾದ ಕೃಷಿಗೆ ರೂ.1,214 ಕೋಟಿಗಳು, ಎಂ.ಎಸ್.ಎಂ.ಇ.ಗೆ ರೂ.1,896 ಕೋಟಿಗಳ ಪಾಲುದಾರಿಕೆ ಹೊಂದಿರುವುದು 2021-22ನೇ ಸಾಲಿನ ಸಾಮರ್ಥ್ಯಕ್ಕನುಗುಣವಾದ ಕ್ರೆಡಿಟ್ ಯೋಜನೆಯ ಪ್ರಮುಖಾಂಶಗಳಾಗಿವೆ ಎಂದರು.
ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ, ಮುಖ್ಯ ಯೋಜನಾಧಿಕಾರಿ ವಿನುತರಾಣಿ.ಬಿ, ಮುಖ್ಯ ಲೆಕ್ಕಾಧಿಕಾರಿ ಟಿ.ರಮೇಶ್ರೆಡ್ಡಿ. ಅಘ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಮಧುಸೂಧನ್.ಎಂ.ಪಿ. ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

