ದೊಡ್ಡಬಳ್ಳಾಪುರ: ಮಧ್ಯರಾತ್ರಿ ಪೆಟ್ರೋಲ್ ಬಂಕ್ಗೆ ನುಗ್ಗಿದ್ದ ಮುಸುಕುಧಾರಿಗಳ ಗ್ಯಾಂಗ್ ಲಾಂಗ್ ತೋರಿಸಿ ಕ್ಯಾಷಿಯರ್‌ನ ಹೆದರಿಸಿ ಇಪ್ಪತ್ತು ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ನಗರದ ಹೊರವಲಯ ರೈಲ್ವೆ ನಿಲ್ದಾಣದ ಬಳಿಯ ರಿಲಯನ್ಸ್ ಪೆಟ್ರೋಲ್ ಬಂಕ್ನಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.( ವಿಡಿಯೋ ನೋಡಿ)
ಡಿ.19ರ ಮಧ್ಯರಾತ್ರಿಯಲ್ಲಿ ರಾತ್ರಿ ಗಸ್ತಿನಲ್ಲಿದ್ದ ಬೀಟ್ ಪೊಲೀಸರು ಪೆಟ್ರೋಲ್ ಬಂಕ್ಗೆ ಭೇಟಿ ನೀಡಿ ತೆರಳಿದ್ದಾರೆ. ಪೊಲೀಸರು ಹಿಂದಿರುಗಿದ ತಕ್ಷಣವೇ ರಾತ್ರಿ 1:56ಕ್ಕೆ ಎರಡು ಬೈಕ್ಗಳಲ್ಲಿ ಹೆಲ್ಮೆಟ್ ಮತ್ತು ಮುಸಕು ಧರಿಸಿ ಬಂದ ಆರು ಜನರ ತಂಡ ಪೆಟ್ರೋಲ್ ಬಂಕ್ಗೆ ನುಗ್ಗಿದೆ.
ದುಷ್ಕರ್ಮಿಗಳು ಕ್ಯಾಷಿಯರ್ ಮಂಜುನಾಥ್ ಎಂಬುವರಿಗೆ ಹೆದರಿಸಿ, ದುಡ್ಡಿನ ಪೆಟ್ಟಿಗೆಯಲ್ಲಿದ್ದ ರೂ.20 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ ಫೂಟೇಜ್ ವಶಕ್ಕೆ ಪಡೆದು ದುಷ್ಕರ್ಮಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಘಟನೆ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

