ದೊಡ್ಡಬಳ್ಳಾಪುರ: ಇಂದು ನಡೆಯುತ್ತಿರುವ ಎರಡನೆ ಹಂತದ ಗ್ರಾಮಪಂಚಾಯಿತಿ ಚುನಾವಣೆ ಮತದಾನ ಸಮಯ ಕಳೆದಂತೆ ತೀವ್ರಗೊಳ್ಳಲಾರಂಭಿಸಿದೆ.
ಆರಂಭಿಕ ಹಂತದಲ್ಲಿ ಶೇ.5.43ರಷ್ಟಿದ್ದ ಮತದಾನ 11ಗಂಟೆಯ ವೇಳೆಗೆ ಶೇ.18.60 ಆಗಿದೆ. ಗ್ರಾಮಸ್ಥರು ಹುರುಪಿನಿಂದ ಮತಗಟ್ಟೆಗಳತ್ತ ಬರುತ್ತಿದ್ದು, ವೃದ್ದರು ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ.
ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 11.00 ಗಂಟೆಯ ವರದಿಯನ್ವಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಶೇ.18.60, ದೇವನಹಳ್ಳಿಯಲ್ಲಿ ಶೇ.23.05 ಒಟ್ಟು 20.82 ಮತದಾನವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

