ದೊಡ್ಡಬಳ್ಳಾಪುರ: ನಗರದ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಪಕ್ಷದ 136ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.
ಓಬಿಸಿ ಘಟಕದ ಅಧ್ಯಕ್ಷ ಪು.ಮಹೇಶ್ ಮಾತನಾಡಿ, ‘ಕಾಂಗ್ರೆಸ್‌ಗೆ ಸುದೀರ್ಘ ಇತಿಹಾಸ ಇದೆ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಹಾಗೂ ದೇಶಕ್ಕೆ ಅನೇಕ ಮಹಾನ್ ನಾಯಕರನ್ನು ಕೊಟ್ಟ ಶ್ರೇಯಸ್ಸು ಪಕ್ಷಕ್ಕೆ ಇದೆ’ ಎಂದು ತಿಳಿಸಿದರು.
ಎಸ್ಸಿ ಘಟಕದ ಅಧ್ಯಕ್ಷ ಮುನಿರಾಜ್ ಮಾತನಾಡಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್, ದೇಶ ಹಾಗೂ ಜನರ ಹಿತಕ್ಕಾಗಿ ತನ್ನ ಕಾರ್ಯಗಳನ್ನು ಮುಂದುವರಿಸಲಿದೆ’ ಎಂದು ಹೇಳಿದರು.
ಈ ವೇಳೆ ಎಸ್ಟಿ ಘಟಕದ ಅಧ್ಯಕ್ಷ ಬೀಮಣ್ಣ,ಕಛೇರಿಪಾಳ್ಯದ ಮಂಜುನಾಥ್, ಹಿರಿಯ ಕಾಂಗ್ರೆಸ್ ಮುಖಂಡರಾದ ಜವಾಜಿ ಸೀತರಾಮ್, ಆಂಜನಮೂರ್ತಿ, ಕುಂಬಾರ ಅಧ್ಯಕ್ಷ ವೀರೂಪಾಕ್ಷ ˌ ಉರ್ಮಣ್ಣ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

