ದೊಡ್ಡಬಳ್ಳಾಪುರ: ವಿಶ್ವ ಹಿಂದೂ ಪರಿಷತ್ ಭಜರಂಗದಳದ ನೇತೃತ್ವದಲ್ಲಿ ಮೂರು ದಿನಗಳ ದತ್ತ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಗರದ ಕರೇನಹಳ್ಳಿಯಲ್ಲಿರುವ ದತ್ತಾತ್ರೇಯ ದೇವಾಲಯದಲ್ಲಿ ದತ್ತಮಾಲೆ ಧರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಭಜರಂಗದಳ ಮತ್ತು ವಿಎಚ್ಪಿ ನೇತೃತ್ವದಲ್ಲಿ ನಡೆಯುತ್ತಿರುವ 7ನೇ ವರ್ಷದ ದತ್ತ ಜಯಂತಿಯ 3 ದಿನಗಳ ಕಾರ್ಯಕ್ರಮಕ್ಕೆ ಭಾನುವಾರ ರಾತ್ರಿ ಚಾಲನೆ ನೀಡಲಾಗಿದ್ದು ಡಿ.29ರಂದು ದತ್ತ ಪಾದುಕೆ ದರ್ಶನದ ಮೂಲಕ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಸುಮಾರು 100ಕ್ಕು ಮಂದಿ ಭಜರಂಗದಳದ ಕಾರ್ಯಕರ್ತರು ಮಾಲಾ ಧಾರಣೆ ಮಾಡಿದ್ದು, ಇಂದು ಸಂಜೆ ನೆಲದಾಂಜನೇಯ ದೇವಾಲಯದಿಂದ ಚಿಕ್ಕಮಗಳೂರಿನ ದತ್ತ ಪೀಠಕ್ಕೆ ತೆರಳಲಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

