ದೊಡ್ಡಬಳ್ಳಾಪುರ: ಎರಡನೇ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಬಿರುಸಿನ ಮತದಾನವಾಗಿದ್ದು, ಕೆಲವೆಡೆ ಮಾತಿನ ಚಕಮಕಿ ಹೊರತು ಪಡಿಸಿ ಶಾಂತಿಯುತವಾಗಿ ಮುಗಿದಿದೆ.
ಅಂತಿಮ ಮತದಾನ ಪ್ರಕ್ರಿಯೆ ರಾತ್ರಿ 11.41ಕ್ಕೆ ಮುಗಿದಿದ್ದು ತಾಲೂಕಿನಲ್ಲಿ ಶೇ.91.62ರಷ್ಟು ಮತದಾನವಾಗಿದೆ. ತಾಲೂಕಿನ ಒಟ್ಟು 1ಲಕ್ಷ 39ಸಾವಿರದ 068 ಮತದಾರರಲ್ಲಿ, 1ಲಕ್ಷ 27ಸಾವಿರ 412 ಮತದಾರರು ಮತ ಚಲಾಯಿಸಿದ್ದಾರೆ.
ಎರಡನೇ ಹಂತದ ಮತದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯಲ್ಲಿ ಚುನಾವಣೆ ನಡೆದಿದೆ. ದೊಡ್ಡಬಳ್ಳಾಪುರದಲ್ಲಿ ಶೇ.91.62, ದೇವನಹಳ್ಳಿಯಲ್ಲಿ ಶೇ.93.24 ಒಟ್ಟು 92.29ರಷ್ಟು ಮತದಾನವಾಗಿದೆ.
ತೀವ್ರ ಪೈಪೋಟಿ ಏರ್ಪಟ್ಟಿದ್ದ ಕ್ಷೇತ್ರಗಳಲ್ಲಿ ಮತದಾರರ ಮನವೊಲಿಸಲು ಅಭ್ಯರ್ಥಿಗಳು ಕೊನೆಯ ಘಳಿಗೆಯವರೆಗೂ ಕಸರತ್ತು ನಡೆಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

