ದೊಡ್ಡಬಳ್ಳಾಪುರ: ತುರ್ತು ಚಿಕಿತ್ಸೆಗೆಂದು ರೋಗಿಯ ಕರೆತರಲು ತೆರಳುತ್ತಿದ್ದಲೆನ್ನಾಗುತ್ತಿದ್ದ ಆಬ್ಯುಲೆನ್ಸ್ ಅಪಘಾತಕ್ಕೀಡಾಗಿದ್ದೂ. ಓರ್ವ ಸಾವನಪ್ಪಿರುವ ಘಟನೆ ನಗರದ ಕುರುಬರಹಳ್ಳಿ ರಸ್ತೆಯಲ್ಲಿ ಸಂಭವಿಸಿದೆ.
ಮೃತಪಟ್ಟವರನ್ನು ಆಬ್ಯುಲೆನ್ಸ್ ಕ್ಲೀನರ್ ರಾಜೀವ್ ಗಾಂಧಿ ಕಾಲೋನಿಯ ನಿವಾಸಿ ನರಸಿಂಹಪ್ಪ (55) ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷ ದರ್ಶಿಗಳ ಹೇಳಿಕೆಯನ್ವಯ, ನಗರದ ನಂದಿ ಆಸ್ಪತ್ರೆಗೆ ಸೇರಿದೆ ಎನ್ನಲಾದ ಮಾರುತಿ ಆಮ್ನಿ ಆಬುಲೆನ್ಸ್ ಇದಾಗಿದ್ದು, ಅಪಘಾತ ಸಂಭವಿಸಿದ ವೇಳೆ ಚಾಲಕ ಹಾಗೂ ಕ್ಲೀನರ್ ಇಬ್ಬರು ಮದ್ಯ ಸೇವಿಸಿದ್ದರನ್ನಲಾಗಿದೆ. ಅಲ್ಲದೇ, ಅತಿ ವೇಗವಾಗಿ ವಾಹನ ಚಾಲನೆ ಮಾಡಿದ ಕಾರಣ ವಾಹನದ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

