ದೊಡ್ಡಬಳ್ಳಾಪುರ: ರೈತ,ಸೈನಿಕ ಇಬ್ಬರಿಗೂ ಸಹ ಒಂದೇ ರೀತಿಯ ಕಷ್ಟಗಳಿವೆ. ಇಲ್ಲಿ ಯಾರ ಸೇವೆಯನ್ನು ಸಣ್ಣದು ಎನ್ನುವಂತಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಜಿ.ಎಂ.ಅಜಿತ್ಕುಮಾರ್ ಹೇಳಿದರು.
ತಾಲ್ಲೂಕಿನ ಕುಂಟನಹಳ್ಳಿ ಗ್ರಾಮದಲ್ಲಿ ಮಾತೃ ಗ್ಯಾಸ್ ಕಂಪನಿಯ ಎನ್.ಕೆ.ರಾಮಕೃಷ್ಣ,ಕೆ.ಗಿರೀಶ್ ಅವರ ಕೊಡುಗೆಯಲ್ಲಿ ನಿರ್ಮಿಸಲಾಗಿರುವ ಬೃಹತ್ ನೀರಿನ ಟ್ಯಾಂಕ್ ಹಾಗೂ ಕೊಳಾಯಿ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಕುಡಿಯುವ ನೀರೇ ನಮ್ಮ ಎಲ್ಲಾ ರೀತಿಯ ಆರೋಗ್ಯದ ಮೂಲ. ಹೀಗಾಗಿ ಕುಡಿಯುವ ನೀರಿನ ಸುತ್ತಮುತ್ತಲು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಕೆಪಿಟಿಸಿಎಲ್ ನಿರ್ದೇಶಕ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಇಲ್ಲಿ ಎಲ್ಲರು ಸಹ ಸಾಧಕರೆ. ನಮ್ಮ ಸಾಧನೆಗಳ ಬಗ್ಗೆ ಮೊದಲು ನಮಗೆ ಹೆಮ್ಮೆ ಇರಬೇಕು. ಎಲ್ಲರು ಅವರದೇ ಕ್ಷೇತ್ರದಲ್ಲಿ ಸಾಧಕರೇ ಆಗಿರುತ್ತಾರೆ ಎಂದು ಹೇಳಿದರು.
ನೀರಿನ ಟ್ಯಾಂಕ್ ದಾನಿಗಳಾದ ಎನ್.ಕೆ.ರಾಮಕೃಷ್ಣ ಮಾತನಾಡಿ, ನೀರು ಸುಲಭವಾಗಿ ದೊರೆತಾಗ ಮಿತವಾಗಿ ಬಳಸುವ ಕಡೆಗೆ ಎಲ್ಲರು ಎಚ್ಚರಿಕೆ ವಹಿಸಬೇಕು. ಹಣ ಕೊಟ್ಟರು ದೊರೆಯದಂತಹ ವಸ್ತುಗಳಲ್ಲಿ ನೀರು ಸಹ ಒಂದಾಗಿದೆ. ಅಂತರ್ಜಲದ ಮೇಲಿನ ಅವಲಂಭನೆ ಹೆಚ್ಚಾಗುತ್ತಿದೆ. ಆದರೆ ಅಂತರ್ಜಲಕ್ಕೆ ಮತ್ತೆ ನೀರು ಸೇರಿಸುವ ಕಡೆಗೆ ಮಾತ್ರ ಯಾರೊಬ್ಬರು ಗಮನವಹಿಸುತ್ತಿಲ್ಲ ಎಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿರವಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ದಾನಿಗಳ ಸಹಕಾರ ದೊರೆಯುವಾಗಿ ಪಕ್ಷ ಬೇದ ಮರೆತು ಗ್ರಾಮದ ಅಭಿವೃದ್ಧಿಗೆ ಎಲ್ಲರು ಮುಂದಾಗಿ ಬಳಸಿಕೊಳ್ಳಗಬೇಕು. ಯುವ ಸಮುದಾಯ ತಮ್ಮ ದುಡಿಮೆಯ ಜೊತೆಗೆ ಗ್ರಾಮದ ಸುತ್ತಲಿನ ಪರಿಸರ ಸಂರಕ್ಷಣೆಯ ಕಡೆಗೂ ಗಮನ ನೀಡಬೇಕಿದೆ ಎಂದರು.
ಸಮಾರಂಭದಲ್ಲಿ ದಾನಿಗಳಾದ ಕೆ.ಗಿರೀಶ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ, ಗ್ರಾಮದ ಮುಖಂಡರಾದ ಬೈರೇಗೌಡ, ಶಿವಕುಮಾರ್, ನಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮುರುಳಿ,ಗಾಯಿತ್ರಿ,ಕೆಂಪರಾಜ್,ಬಿರದಾರ್,ಕೃಷ್ಣಪ್ರಸಾದ್,ಶಿವಶಂಕರ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

