ಬೆಂ.ಗ್ರಾ.ಜಿಲ್ಲೆ: ಗ್ರಾಪಂ ಫೈಟ್ ಮುಗಿದಿದೆ. ಎರಡು ಹಂತದಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಬೇಡಿಕೆ ಹೆಚ್ಚಾಗಿದೆ. ಗ್ರಾಮಪಂಚಾಯಿತಿಗಳ ಅಧಿಕಾರ ಗದ್ದುಗೆ ಹಿಡಿಯಲು ಪಕ್ಷದ ಮುಖಂಡರು ತಂತ್ರಗಾರಿಕೆ ರೂಪಿಸಲು ಮುಂದಾಗಿದ್ದಾರೆ.
ಜಿಲ್ಲೆಯ 93 ಗ್ರಾಪಂಗಳ ಸಾರ್ವತ್ರಿಕ ಚುನಾವಣಾ ಮತ ಎಣಿಕೆ ಮುಕ್ತಾಯವಾಗಿ, ಅಂತಿಮವಾಗಿ 1626 ಸದಸ್ಯರು ಗ್ರಾಪಂಗಳಿಗೆ ಆಯ್ಕೆಯಾಗಿದ್ದಾರೆ. ಪಕ್ಷ ರಹಿತವಾಗಿರುವ ಗ್ರಾಪಂ ಚುನಾವಣೆಯಲ್ಲಿ ಪಕ್ಷಗಳ ಬೆಂಬಲಿಗರು ಚುನಾವಣೆಗೆ ನಿಂತು ಗೆದ್ದಿರುವ ಪರಿಣಾಮ ಈಗ ಪಂಚಾಯಿತಿಗಳ ಗದ್ದುಗೆ ಹಿಡಿಯಲು ಸದಸ್ಯರ ಕುದುರೆ ವ್ಯಾಪಾರ ಪ್ರಾರಂಭವಾಗಿದೆ.
ಗೆದ್ದಿರುವ ಅಭ್ಯರ್ಥಿಗಳಲ್ಲಿ ಕೆಲವರು ಇನ್ನೂ ಯಾವ ಪಕ್ಷದ ಬೆಂಬಲಿಗರು ಎಂದು ಹೇಳುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಮುಖಂಡರು ಅವರು ನಮ್ಮ ಪಕ್ಷದವರು ಎಂದು ಹೇಳಿಕೊಳ್ಳುತ್ತಿದ್ದಾರೆ. ಪಕ್ಷಗಳ ನಾಯಕರು ತಮ್ಮ ಪಕ್ಷದ ಬೆಂಬಲಿಗರು ಇಷ್ಟು ಸದಸ್ಯರು ಗೆದ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗ ಮೂರು ಪಕ್ಷಗಳವರು ಗ್ರಾಪಂ ಅಧ್ಯಕ್ಷ. ಉಪಾಧ್ಯಕ್ಷರ ಮೇಲೆ ಕಣ್ಣಿಟ್ಟಿದ್ದು, ಅದಕ್ಕೆಪೂರಕವಾಗಿ ಸದಸ್ಯರ ಬಲಬೇಕಾಗಿದೆ.
ಮೀಸಲಾತಿಗೆ ಅನುಗುಣವಾಗಿ ತಮ್ಮ ಪಕ್ಷದ ಬೆಂಬಲಿಗರನ್ನುಅಧ್ಯಕ್ಷರನ್ನಾಗಿ ಮಾಡಿದರೆ ಆ ಗ್ರಾಪಂ ನಮ್ಮ ಪಕ್ಷದ ವಶಕ್ಕೆ ಪಡೆಯಬಹುದು ಎಂದು ಪಕ್ಷಗಳು ಪಕ್ಷಗಳು ರಣ ತಂತ್ರ ರೂಪಿಸುತ್ತಿದ್ದು, ಮೀಸಲಾತಿ ಪಟ್ಟಿಗಾಗಿ ಕಾಯುತ್ತಿದ್ದಾರೆ. ರಾಜಕೀಯ ಪ್ರಮುಖರ ಆಶೀರ್ವಾದ ಗ್ರಾಪಂನಲ್ಲಿ ಗೆದ್ದಿರುವ ಸದಸ್ಯರು ತಮ್ಮ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ತಮ್ಮ ಮುಖಂಡರ ಆಶೀರ್ವಾದ ಪಡೆಯುತ್ತಿದ್ದದ್ದು ಕಂಡು ಬಂದಿತು.
ಇನ್ನು ಕೆಲವರು ಮೂರು ಪಕ್ಷಗಳ ಬೆಂಬಲಿಗರು ಅಲ್ಲದೇ ಅನೇಕರು ಪಕ್ಷೇತರವಾಗಿ ಗೆಲುವುಸಾಧಿಸಿದ್ದಾರೆ ಅಂತಹ ಸದಸ್ಯರಿಗೆ ಬಾರೀ ಬೇಡಿಕೆ ಬಂದಿದೆ. ಕೆಲವು ಸದಸ್ಯರು ಇಂದಿಗೂ ತಾವು ಯಾವ ಪಕ್ಷದ ಬೆಂಬಲಿಗ ಎಂದು ಹೇಳಿಕೊಳ್ಳುತ್ತಿಲ್ಲ. ಕಾದುನೋಡು ವ ತಂತ್ರ ಅನುಸರಿಸುತ್ತಿದ್ದಾರೆ.
1626 ಸದಸ್ಯರ ಆಯ್ಕೆ: ಜಿಲ್ಲೆಯ 92 ಗ್ರಾಪಂಗಳ ಸಾರ್ವತ್ರಿಕ ಚುನಾವಣಾ ಮತ ಎಣಿಕೆಯು ಶಾಂತಿಯುತವಾಗಿ ಮುಕ್ತಾಯ ಗೊಂಡಿದ್ದು. ಅಂತಿಮವಾಗಿ 1626 ಸದಸ್ಯರು ಆಯ್ಕೆಯಾಗಿದ್ದು ಇನ್ನು ಪಂಚಾಯಿತಿಗಳ ಅಧಿಕಾರ ಗದ್ದುಗೆಯತ್ತ ಮುಖಮಾಡಿದ್ದಾರೆ.
ಹೊಸಕೋಟೆ: ತಾಲೂಕಿನ 26 ಗ್ರಾಮಪಂಚಾಯಿತಿಗಳಿಗೆ 495 ಮಂದಿ ಆಯ್ಕೆಯಾಗಿದ್ದಾರೆ.
ನೆಲಮಂಗಲ: ತಾಲೂಕಿನ 21 ಗ್ರಾಮಪಂಚಾಯಿತಿಗಳಿಗೆ 362 ಮಂದಿ ಆಯ್ಕೆಯಾಗಿದ್ದಾರೆ.
ದೊಡ್ಡಬಳ್ಳಾಪುರ: ತಾಲೂಕಿನ 25 ಗ್ರಾಮಪಂಚಾಯಿತಿಗಳಿಗೆ 443 ಮಂದಿ ಆಯ್ಕೆಯಾಗಿದ್ದಾರೆ.
ದೇವನಹಳ್ಳಿ: ತಾಲೂಕಿನ 20 ಗ್ರಾಮಪಂಚಾಯಿತಿಗಳಿಗೆ 327 ಮಂದಿ ಆಯ್ಕೆಯಾಗಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

