ದೊಡ್ಡಬಳ್ಳಾಪುರ: ರಾಜಕೀಯ ದ್ವೇಷಕ್ಕೆ 3 ಎಕರೆಯಲ್ಲಿ ಬೆಳೆದಿದ್ದ ರೂ 20 ಲಕ್ಷ ಮೌಲ್ಯದ ಟೊಮಾಟೊ ಬೆಳೆಯನ್ನ ರಾತ್ರೋರಾತ್ರಿ ದುಷ್ಕರ್ಮಿಗಳು ಹಾಳು ಮಾಡಿದ್ದಾರೆ.
ತಾಲೂಕಿನ ಕುರುವಿಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಕ್ಕದ ಕಾರನಾಳ ಗ್ರಾಮದ ಅಶ್ವಥ್ ನಾರಾಯಣ್ ಕುರುವಿಗೆರೆ ಗ್ರಾಮದಲ್ಲಿನ ತಮ್ಮ 3 ಎಕರೆ 10 ಗುಂಟೆ ಜಾಗದಲ್ಲಿ ಟೊಮಾಟೊ ಬೆಳೆದಿದ್ದರು, ಟೊಮಾಟೊ ಫಸಲಿಗೆ ಬಂದಿದ್ದು ಮಾರುಕಟ್ಟೆಗೆ ಸಾಗಿಸುವ ಸಿದ್ದತೆಯಲ್ಲಿದ್ದರು, ಭಾನುವಾರ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ಟೊಮಾಟೊ ಬೆಳೆಗೆ ನುಗ್ಗಿದ ದುಷ್ಕರ್ಮಿಗಳು ಟೊಮಾಟೊ ಗಿಡಗಳು ಕತ್ತರಿಸಿ ಹಾಕಿದ್ದಾರೆ, ಸುಮಾರು 20 ಲಕ್ಷ ಮೌಲ್ಯದ ಟೊಮಾಟೊ ಬೆಳೆ ನಾಶವಾಗಿದೆ ಎಂದು ರೈತ ಅಶ್ವಥ್ ನಾರಾಯಣ್ ತಮ್ಮ ಅಳಲು ತೊಡಿಕೊಂಡರು.
ಕಾರನಾಳ ಗ್ರಾಮದ ವ್ಯಕ್ತಿಯೋರ್ವ ರಾಜಕೀಯ ದ್ವೇಷದಿಂದ ತಮ್ಮ ಟೊಮಾಟೊ ಬೆಳೆಯನ್ನ ನಾಶ ಮಾಡಿದ್ದಾರೆಂದು ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

