ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನ ವೀಲಿಂಗ್ ಮಾಡುವ ವೇಳೆ ಯುವಕರಿಬ್ಬರು ಜೆಸಿಬಿ ಡಿಕ್ಕಿ ಒಡೆದು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ನಗರದ ಹೊರವಲಯದ ಹೊಸಹುಡ್ಯ ಗೇಟ್ ಸಮೀಪದಲ್ಲಿ ಸಂಭವಿಸಿದೆ.
ಮೃತರ ಗುರುತು ಇದುವರೆವಿಗೂ ದೊರೆತಿಲ್ಲವಾಗಿದ್ದು, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ರಸ್ತೆಯಲ್ಲಿ ತೆರಳುತ್ತಿದ್ದ ಜೆಸಿಬಿಗೆ ಏಕ ಮುಖ ರಸ್ತೆಯಲ್ಲಿಯೇ ವೀಲಿಂಗ್ ಮಾಡುತ್ತಾ ಎದುರು ಬಂದ ಯುವಕರು ಜೆಸಿಬಿಗೆ ಗುದ್ದಿದ್ದು, ಘಟನೆ ಕಾರಣ ಎಂದು ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

