ದೊಡ್ಡಬಳ್ಳಾಪುರ: ತಾಲೂಕಿನ ಮಾಕಳಿ ಬೆಟ್ಟದ ತಪ್ಪಲಿನ ಗ್ರಾಮಸ್ಥರಿಗೆ ಕಳೆದ ಕೆಲ ದಿನಗಳಿಂದ ಮತ್ತೆ ಚಿರತೆ ಆತಂಕ ಆರಂಭವಾಗಿದೆ.
ಗುರುವಾರ ರಾತ್ರಿ ಸೊಣ್ಣೆನಹಳ್ಳಿ ನಿವಾಸಿ ಉಮೇಶ್ ಎನ್ನುವವರ ತೋಟದ ಮನೆಗೆ ನುಗ್ಗಿರುವ ಚಿರತೆ. 3 ಮೇಕೆ ಹಾಗೂ 1 ಕುರಿಯನ್ನು ಕಚ್ಚಿ ಕೊಂದು ಹಾಕಿದೆ. ಅಲ್ಲದೆ ಮತ್ತೊಂದು ಕುರಿಯ ಮೇಲೆ ದಾಳಿ ಮಾಡಿದ್ದು ಅದು ಸಹ ತೀವ್ರವಾಗಿ ಗಾಯಗೊಂಡಿದೆ.
ಇದರಿಂದಾಗಿ ಸುಮಾರು 30 ಸಾವಿರಕ್ಕು ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಎಂದಿನಂತೆ ಸಂಜೆ ರೈತ ಉಮೇಶ್ ಹಸುವಿನ ಹಾಲು ಕರೆದು ಮನೆಗೆ ಕೊಂಡೊಯ್ದಿದ್ದ ವೇಳೆ, ತೋಟದ ಮನೆಯಲ್ಲಿ ಯಾರು ಇರದನ್ನ ಹೊಂಚು ಹಾಕಿದ್ದ ಚಿರತೆ ತೋಟದ ಮನೆಗೆ ನುಗ್ಗಿ ಮೇಕೆ ಹಾಗು ಕುರಿಯ ಮೇಲೆ ದಾಳಿ ನಡೆಸಿ ರಕ್ತ ಹೀರಿ ಸಾಯಿಸಿದೆ.
ಮಾಕಳಿ ಬೆಟ್ಟದ ತಪ್ಪಲಿನ ಸುತ್ತ ಮುತ್ತಲ ಗ್ರಾಮಗಳಲ್ಲಿ ಆಗಿಂದಾಗ್ಗೆ ಚಿರತೆ ಪ್ರತ್ಯಕ್ಷವಾಗುತ್ತಿದೆ. ಈ ವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು ಯಾವುದೇ ಕ್ರಮಕೈಗೊಳ್ಳದಿರುವುದು ಈ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

