ಬೆಂ.ಗ್ರಾ.ಜಿಲ್ಲೆ: ಮಕ್ಕಳ ರಕ್ಷಣಾ ನಿರ್ದೇಶನಾಲಯವು, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015ರ ಅನ್ವಯ ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳನ್ನು, ಬಾಲಾಪರಾಧಿಗಳು ಎಂದು ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳನ್ನು, ಸುಧಾರಣಾ ಸಂಸ್ಥೆಗಳು(ಕರೆಕ್ಷನಲ್ ಹೋಮ್ಸ್) ಎಂದು ಕರೆಯುವುದು ತಪ್ಪಾಗುತ್ತದೆ.
ಆದ್ದರಿಂದ ಮಾಧ್ಯಮಗಳಲ್ಲಿ ಬಾಲಾಪರಾಧಿಗಳು ಎಂದು ಸಂಬೋಧಿಸುವ ಬದಲು “ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು” ಹಾಗೂ ಸುಧಾರಣಾ ಸಂಸ್ಥೆಗಳು(ಕರೆಕ್ಷನಲ್ ಹೋಮ್ಸ್) ಎಂದು ಸಂಬೋಧಿಸುವ ಬದಲು “ಮಕ್ಕಳ ಪಾಲನಾ ಸಂಸ್ಥೆಗಳು” ಎಂದು ಮಾತ್ರ ಸಂಬೋಧಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

