ದೊಡ್ಡಬಳ್ಳಾಪುರ: ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ಉಂಟಾಗುವ ಅನವಶ್ಯಕ ವಿಳಂಬ, ತೊಂದರೆಗಳಿಗೆ ಕಾನೂನಿನ ನೆರವನ್ನು ನೀಡಲು, ತಾಲೂಕು ಕಾನೂನು ಸೇವಾ ಸಮಿತಿವತಿಯಿಂದ ಇಂದಿನಿಂದ ಸರ್ಕಾರಿ ಕಚೇರಿಗಳಲ್ಲಿ ಕಾನೂನು ಸೇವಾ ಸಲಹಾ ಪೆಟ್ಟಿಗೆಯನ್ನು ಅಳವಡಿಸಲಾಗಿದೆ.
ನಗರದ ತಾಲೂಕಿನ ತಾಲೂಕು ಕಚೇರಿ, ನಗರಸಭೆ, ನಾಡಕಚೇರಿ, ಸಿಡಿಪಿಒ ಕಚೇರಿ, ಪೊಲೀಸ್ ಠಾಣೆ, ಗ್ರಾಪಂಗಳು ಸೇರಿದಂತೆ 42 ಕಡೆಗಳಲ್ಲಿ ಈ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ
ಸಾರ್ವಜನಿಕರು ಸ್ವ ವಿಳಾಸದೊಂದಿಗೆ, ಉಂಟಾಗುತ್ತಿರುವ ಸಮಸ್ಯೆ ಬರೆದು ಕಾನೂನಿನ ಸಹಾಯಕ್ಕಾಗಿ ಪತ್ರವನ್ನು ಆ ಡಬ್ಬಿಯಲ್ಲಿ ಹಾಕಿದಲ್ಲಿ, ಆ ಪತ್ರಕ್ಕೆ ಒಂದು ತಿಂಗಳ ಒಳಗಾಗಿ ತಾಲೂಕು ಕಾನೂನು ಸೇವಾ ಸಮಿತಿವತಿಯಿಂದ ಮೂಲಕ ನೆರವು ನೀಡಲಾಗುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

