ದೊಡ್ಡಬಳ್ಳಾಪುರ: ಸಮಾಜದಲ್ಲಿ ಸಾಧನೆ ಮಾಡಿದವರಿಗೆ ಸಿಗುವ ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಡಿವೈಎಸ್ಪಿ ಟಿ.ರಂಗಪ್ಪ ಹೇಳಿದರು.
ನಗರದ ಕನ್ನಡ ಜಾಗೃತಭವನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೆ ಅಂತ್ಯವೆಂಬುದು ಸಾಮಾನ್ಯ. ಆದರೆ, ಸಮಾಜದಲ್ಲಿ ಆ ವ್ಯಕ್ತಿಯ ಕೌಶಲ್ಯ, ಪ್ರತಿಭೆ ಇತರರು ಪಾಲಿಸುವಂತಾಗಬೇಕು. ಆ ಮೂಲಕ ವ್ಯಕ್ತಿಗಳು ಸಾವನ್ನಪ್ಪಿದ ನಂತರವು ವ್ಯಕ್ತಿತ್ವ ಜೀವಂತವಾಗಿರುವಂತಾಗುತ್ತದೆ. ತಾಲೂಕಿನಲ್ಲಿ ಪ್ರತಿಭಾವಂತ ಯುವಕರನ್ನು ಗುರುತಿಸುವಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು.
ಪೊಲೀಸ್ ಇಲಾಖೆಯಲ್ಲೆ ಪರಿಶೀಲನೆ: ದೊಡ್ಡಬಳ್ಳಾಪುರ ಉಪವಿಭಾಗದಲ್ಲಿನ ಎಲ್ಲ ಸಿಬ್ಬಂದಿಗಳು ಸಾರಿಗೆ ನಿಯಮಗಳನ್ನು ಪಾಲಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಜತೆಗೆ, ಸಿಬ್ಬಂದಿಗಳ ವಾಹನಗಳ ಎಮಿಶನ್ ಟೆಸ್ಟ್, ಆರ್.ಸಿ ಸೇರಿದಂತೆ ಸಂಚಾರಿ ದಾಖಲೆಗಳನ್ನು ಮೊದಲು ಅವರು ಹೊಂದಿರುವರೇ ಎನ್ನುವ ಪರಿಶೀಲನೆ ನಡೆಸಲಾಗುತ್ತದೆ. ಆ ಬಳಿಕ ಸಿಬ್ಬಂದಿಗಳು ಸಾರ್ವಜನಿಕರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಸಿಪಿಐ ಎಂ.ಬಿ.ನವೀನ್‍ಕುಮಾರ್ ಮಾತನಾಡಿ, ನನ್ನ ಹಿರಿಯ ಅಕಾರಿಗಳ ಮಾರ್ಗದರ್ಶನ ಸೇರಿದಂತೆ ನನ್ನ ಸಹದ್ಯೋಗಿಗಳ ಪೂರಕ ಸಹಕಾರದಿಂದ ನಾನು ಮುಖ್ಯಮಂತ್ರಿಗಳ ಪದಕ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. ಇದಲ್ಲದೆ ನಾನು ಸೇವೆ ಸಲ್ಲಿಸಿರುವ ವ್ಯಾಗಳಲ್ಲಿ ಜನಗಳ ಸಹಕಾರ ಮತ್ತು ಸಿಐಡಿಯಲ್ಲಿ ಕಾರ್ಯ ನಿರ್ವಹಿಸು ಸಂದರ್ಭದಲ್ಲಿ ಅಲ್ಲಿನ ಹಿರಿಯ ಅಕಾರಿಗಳ ಸಹಕಾರ, ಮಾರ್ಗದರ್ಶ ಇತ್ತು. ಇದರಿಂದಾಗಿ ನಾನು ಇಲಾಖೆಯಲ್ಲಿ ಉತ್ತಮ ಸೇವೆ ನೀಡಿ ಪ್ರಶಸ್ತಿಗೆ ಅರ್ಹನಾಗಿದ್ದೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡಪರ, ರೈತ ಪರ, ದಲಿತಪರ ಹಾಗೂ ಕಾರ್ಮಿಕ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

