ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸಾವನಪ್ಪಿ, ಮಗುವೊಂದು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹಾಡೋನಹಳ್ಳಿಯ ಗ್ರಾಮಪಂಚಾಯಿತಿ ಮುಂಭಾಗ ಸಂಭವಿಸಿದೆ.
ಮೃತರನ್ನು ಹಾಡೋನಹಳ್ಳಿಯ ನಿವಾಸಿ ನಂಜೇಗೌಡ(38) ಮತ್ತು ತಿಪ್ಪಗೊಂಡನಹಳ್ಳಿ ನಿವಾಸಿ ಸಾಗರ್(18) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ತಿಪ್ಪಗೊಂಡನಹಳ್ಳಿಯ ಸಾಗರ್ ಪಕ್ಕದ ಮನೆಯ ಆಪ್ತರ ಮಗುವನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಹಾಡೋನಹಳ್ಳಿಯಲ್ಲಿ ಗೋಬಿ ಮಂಚೂರಿ ತಿಂದು ವಾಪಸ್ ಮರಳುತ್ತಿದ್ದು, ದುರಾದೃಷ್ಟವಶಾತ್ ಯಾವುದೋ ಕಾರಣಕ್ಕೆ ಮತ್ತೆ ಹಿಂತಿರುಗಿ ಬರುವಾಗ ಹಾಡೋನಹಳ್ಳಿ ಗ್ರಾಮದ ನಂಜೇಗೌಡ ಬಸ್ ನಿಲ್ದಾಣದಿಂದ ಮನೆಗೆ ಮರಳುತ್ತಿದ್ದ ವೇಳೆ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹರಿತಲೇಖನಿಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಸಾಗರ್ ಸ್ಥಳದಲ್ಲೆ ಸಾವನಪ್ಪಿದ್ದರೆ, ತೀವ್ರವಾಗಿ ಗಾಯಗೊಂಡ ನಂಜೇಗೌಡರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ. ಅಲ್ಲದೆ, ಸಾಗರ್ ಜೊತೆಗಿದ್ದ ಮಗುವಿನ ತಲೆಗೂ ಸಹ ತೀವ್ರವಾದ ಪೆಟ್ಟಾಗಿದ್ದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.
ಘಟನೆ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

