ಪ್ರಪಂಚದ ಬೇರಾವುದೇ ದೇಶಕ್ಕೆ ಸಿಗದ ಅದೃಷ್ಟ ನಮ್ಮ ಭಾರತಕ್ಕೆ ಸಿಕ್ಕಿದೆ. ಅದೇನೆಂದರೆ ಪ್ರಪಂಚದ ಅತಿದೊಡ್ಡ ಯುವ ಸಮೂಹ.
ಹೌದು… ಭಾರತದಲ್ಲಿರುವಷ್ಟು ಯುವ ಶಕ್ತಿ ಜಗತ್ತಿನ ಉಳಿದಾವ ದೇಶಗಳಲ್ಲಿಯೂ ಇಲ್ಲ. ಭಾರತದ ಸಾರ್ವತ್ರಿಕ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ಹೊಂದಿರುವ ಈ ಯುವಶಕ್ತಿ ತನ್ನ ದೇಶವನ್ನು ಮುನ್ನಡೆಸುವ ಸಮರ್ಥ ನಾಯಕನನ್ನು ಆಯ್ಕೆ ಮಾಡುವಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಉದಾಹರಣೆಗೆ ಇತ್ತೀಚಿನ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು. ಅದೇ ಫಲಿತಾಂಶಗಳಲ್ಲಿ ದೇಶದ ಯುವಶಕ್ತಿ ತನ್ನ ಪಾತ್ರವನ್ನು ನಿಭಾಯಿಸುತ್ತಿದೆ. ಆ ಸಫಲತೆಯ ಬೆನ್ನಹಿಂದೆ “ಸಾಮಾಜಿಕ ಜಾಲತಾಣ”ಗಳ ಬಳಕೆ ಮಹತ್ವದ್ದಾಗಿತ್ತು. ಈ ಜಾಲತಾಣಗಳನ್ನು ನಾವುಗಳು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು. ಅದೃಷ್ಟವಶಾತ್ ಆ ಸಂದರ್ಭದಲ್ಲಿ ದೇಶದ ಹಿತದೃಷ್ಟಿಯಿಂದ ನಮ್ಮ ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಸಕಾರಾತ್ಮಕವಾಗಿ ಬಳಸಿಕೊಂಡಿತು. ಅಲ್ಲಿಂದ ಇಲ್ಲಿಯವರೆಗೂ ರಾಜಕೀಯ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳು ಮಹತ್ವ ಪಡೆದಿವೆ. ಇದನ್ನು ಹೊರತುಪಡಿಸಿ ಸಾಮಾಜಿಕ ಜಾಲತಾಣಗಳ ಇನ್ನೊಂದು ಮಜಲನ್ನು ನೋಡುವುದಾದರೆ,
ನಮ್ಮ ಯುವಜನತೆಯ ಬಹುತೇಕರು ಆನ್‌ಲೈನ್ ಜೂಜಿನ ಬೆನ್ನುಹತ್ತಿ ತಮ್ಮ ಭವಿಷ್ಯವನ್ನು ಕತ್ತಲೆಡೆಗೆ ದೂಡುತ್ತಿರುವುದು ಬಹಳ ಆತಂಕಕಾರಿ ಸೂಕ್ಷ್ಮ ವಿಷಯವಾಗಿದೆ. ಹೌದು.., ಇತ್ತೀಚಿನ ದಿನಗಳಲ್ಲಿ ನಮ್ಮ ಯುವಸಮೂಹ ಆನ್‌ಲೈನ್‌ನಲ್ಲಿ ತಮ್ಮ ದೈನಂದಿನ ಹೆಚ್ಚಿನ ಸಮಯವನ್ನು ಜೂಜುಗಳಿಗೆ ಕಳೆಯುತ್ತಿದ್ದಾರೆ. ಇದರ ನೇರ ಪರಿಣಾಮ ಮಧ್ಯಮ ವರ್ಗದ ಆರ್ಥಿಕತೆಯ ಮೇಲಾಗುತ್ತಿದೆ. ಸಾರ್ವಜನಿಕರು ಊರುಗಳಲ್ಲಿ ಜೂಜಾಡಿದರೆ ದಾಳಿಮಾಡಿ ಜೈಲಿಗಟ್ಟುವ ಸರ್ಕಾರ, ಆನ್ಲೈನ್ ಜೂಜಿಗೆ ಕಡಿವಾಣ ಹಾಕುವ ಮನಸ್ಸು ಮಾಡಿಲ್ಲವೇಕೋ….!
ಇದು ಹೀಗೆಯೇ ಮುಂದುವರಿದರೆ
ಯುವಜನತೆ ತಮ್ಮ ನೈತಿಕ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ದೇಶದ ಭವಿಷ್ಯಕ್ಕೆ ಕೊಡಲಿಪೆಟ್ಟು ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಪ್ರಜ್ಞಾವಂತರು ಆನ್ಲೈನ್ ಜೂಜಾಟಗಳನ್ನು ನಿಷೇಧಿಸುವಂತೆ ಟ್ವಿಟರ್ ಅಭಯಾನ ನಡೆಸಿ ಒತ್ತಾಯಿಸುತ್ತಿದ್ದಾರೆ.
ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಿ, ದೇಶದ ಹಿತದೃಷ್ಟಿಯಿಂದ ಆನ್ಲೈನ್ ಜೂಜಾಟಗಳನ್ನು ನಿಷೇಧಿಸಿ ಯುವಜನತೆಯ ಮುಂದಿನ ಬದುಕನ್ನು ಉಳಿಸಿ,ದೇಶವನ್ನು ಉಳಿಸಲು ಕ್ರಮ ಕೈಗೊಳ್ಳಲಿ ಎಂಬ ಆಶಯದೊಂದಿಗೆ..ಇಂತಿ ತಮ್ಮವ…ಜಿ.ಎನ್.ಪ್ರದೀಪ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

