ದೊಡ್ಡಬಳ್ಳಾಪುರ: ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದ ಸಮೀಪದ ಗುರುರಾಜ ಕಲ್ಯಾಣ ಮಂಟಪದ ಹಿಂಭಾಗ ನಡೆದಿದೆ.
ಚಹರೆ: ಸುಮಾರು 35 ವರ್ಷ, 5 ಅಡಿ ಎತ್ತರವಿದ್ದು, ಗೋದಿ ಮೈಬಣ್ಣ, ಚಿಕ್ಕದಾದ ಕಿವಿಗಳು, ಗಿಡ್ಡವಾದ ಮೂಗನ್ನು ಹೊಂದಿದ್ದಾರೆ, ತಲೆಯಲ್ಲಿ ಸುಮಾರು ಎರಡು ಇಂಚಿನಷ್ಟು ಉದ್ದದ ಕಪ್ಪು ಕೂದಲು ಇರುತ್ತದೆ.ಮುಖಕ್ಕೆ ಗುರುತಿಸಲಾಗದಷ್ಟು ತೀವ್ರವಾದ ಪೆಟ್ಟಾಗಿದೆ
ಮೃತನ ವಾರಸುದಾರರು ಇದ್ದಲ್ಲಿ ಮೋ- 9480802143 ಸಂಪರ್ಕಿಸಲು ದೊಡ್ಡಬಳ್ಳಾಪುರ ರೇಲ್ವೆ ಠಾಣೆ ಉಪ ಆರಕ್ಷಕ ನಿರೀಕ್ಷಕ ವಸಂತಕುಮಾರ್ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

