ದೊಡ್ಡಬಳ್ಳಾಪುರ: ಈಗಾಗಲೇ ಭಾರತ್ ಗ್ಯಾಸ್ ಅಡುಗೆ ಅನಿಲ ಸಂಪರ್ಕ ಪಡೆದಿದ್ದು ಒಂದು ಸಿಲಿಂಡರ್ ಮಾತ್ರ ಹೊಂದಿರುವ ಗ್ರಾಹಕರು 2ನೇ ಸಿಲಿಂಡರ್ ಸಂಪರ್ಕ ಪಡೆದು ಬಂಪರ್ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ ಎಂದು ನಗರದ ಮಂಜುನಾಥ್ ಗ್ಯಾಸ್ ಏಜನ್ಸಿ ಮಾಲೀಕ ನಂದಕುಮಾರ್ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ, ಕಾರು, ಬೈಕ್ ಸೇರಿದಂತೆ ರೂ10 ಲಕ್ಷಕ್ಕೂ ಅಧಿಕ ಮೌಲ್ಯದ ಒಟ್ಟು 78 ಬಹುಮಾನಗಳು ಗ್ರಾಹಕರಿಗೆ ಲಭಿಸಲಿವೆ.
ಈ ಅವಕಾಶ ಜ.1 ರಿಂದ ಏಪ್ರಿಲ್ 20ರವರೆಗೆ ಸಂಪರ್ಕ ಪಡೆಯುವ ಗ್ರಾಹಕರಿಗೆ ಮಾತ್ರ ಅನ್ವಯ. ಲಕ್ಕಿ ಡ್ರಾ ಮೂಲಕ ಆಯ್ಕೆಯಾಗುವ ಗ್ರಾಹಕರಿಗೆ ಏ.24 ರಂದು ಬಹುಮಾನಗಳ ವಿತರಣೆ ನಡೆಯಲಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಚಿತ್ರದುರ್ಗ, ಮಂಡ್ಯ ಜಿಲ್ಲೆಯ ಗ್ರಾಹಕರಿಗೆ ಮಾತ್ರ ಬಹುಮಾನ ಗೆಲ್ಲುವ ಅವಕಾಶವಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

