ದೇವನಹಳ್ಳಿ: 145 ಜನ ಪುರುಷರು, 96 ಜನ ಮಹಿಳೆಯರು, 32 ಮಕ್ಕಳು, 16 ಜನ ವಿಮಾನ ಸಿಬ್ಬಂದಿ ಸೇರಿದಂತೆ ಒಟ್ಟು 289 ಜನರು ಲಂಡನ್ ನಿಂದ ಬೆಂಗಳೂರಿಗೆ ಆಗಮಿಸಿದ್ರು…
ಇಂದು ಮುಂಜಾನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ
ಲಂಡನ್ ನಿಂದ ಬಂದವರಿಗೆ ಕೊರೊನಾ ಎರಡನೆ ಅಲೆಯ ಹಿನ್ನಲೆ ಅಂಟಿಜನ್ ಮತ್ತು ಪಿಸಿಆರ್ ಸ್ವಾಬ್ ಟೆಸ್ಟಿಂಗ್ ಮಾಡಲಾಯ್ತು..
145 ಜನ ಪುರುಷರು, 96 ಜನ ಮಹಿಳೆಯರು, 32 ಮಕ್ಕಳು, 16 ಜನ ವಿಮಾನ ಸಿಬ್ಬಂದಿ ಸೇರಿದಂತೆ ಒಟ್ಟು 289 ಜನರು ಲಂಡನ್ ನಿಂದ ಬೆಂಗಳೂರಿಗೆ ಆಗಮಿಸಿದ್ರು….
ಸತತ ಆರು ಗಂಟೆಗಳ ಬಳಿಕ ಲ್ಯಾಬ್ ನಿಂದ ಸ್ವಾಬ್ ಟೆಸ್ಟ್ ರಿಪೋರ್ಟ್ ಬಂದಿದ್ದು ,
289 ಜನರಲ್ಲಿ 285 ಜನರ ಕೋವಿಡ್ ಟೆಸ್ಟ್ ವರದಿ ನೆಗಟಿವ್, ನಾಲ್ವರ ವರದಿ ಅನುಮಾನ, ಅನುಮಾನ ಬಂದವರನ್ನ ಉಳಿಸಿಕೊಂಡು ಉಳಿದವರನ್ನ ಹೋಂ ಕ್ವಾರಂಟೈನ್ ಗೆ ಅಧಿಕಾರಿಗಳು ಕಳುಹಿಸಿದ್ರು.
ಒರ್ವ ಮಹಿಳೆ ಸೇರಿ ಮೂವರು ಪುರುಷರ ವರದಿ ಅನುಮಾನವಾಗಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರಿಗೂ ಏರ್ಪೋಟ್ ನಲ್ಲಿ ಮತ್ತೊಮ್ಮೆ ಕೋವಿಡ್ ಟೆಸ್ಟ್ ಮಾಡಿದ್ದು,ಟೆಸ್ಟ್ ನೆಗಟಿವ್ ಬಂದ್ರೆ ಹೋಂ ಕ್ವಾರಂಟೈನ್ ಪಾಸಿಟಿವ್ ಬಂದ್ರೆ ಐಸುಲೇಷನ್ ಗೆ ಕಳುಹಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

