ದೊಡ್ಡಬಳ್ಳಾಪುರ: ನಗರದ ಡಿಪಿವಿ ಕಲ್ಯಾಣಮಂಟಪದಲ್ಲಿ ಅರ್ಪಿತ ಸೇವಾ ಟ್ರಸ್ಟ್ ಲಗ್ಗೆರೆ,ಹಾಗೂ ಸಪ್ತಗಿರಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಬಿಜೆಪಿ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಉದ್ಘಾಟಿಸಿದರು.
ಈ ವೇಳೆ ಸುಮಾರು 500ಕ್ಕು ಹೆಚ್ಚು ಮಂದಿ ಆರೋಗ್ಯ ತಪಾಸಣೆಗೆ ಒಳಗಾದರು. ಇದೇ ವೇಳೆ ಭಾರತೀಯ ಜನತಾ ಪಾರ್ಟಿ ಹಿರಿಯ ಕಾರ್ಯಕರ್ತರಾದ ಭದ್ರಣ್ಣ, ಗಾಲಿ ಬಸವರಾಜ್, ಸುಬ್ಬರಾಮಶೆಟ್ಟಿ, ಲಕ್ಷ್ಮಣ್ ರಾವ್ ಮೋಹಿತೆ, ರಾಮ್ ಸುಬ್ಬು, ಕೆ.ಪಿ.ವೆಂಕಟಾಚಲಯ್ಯ, ಭದ್ರಣ್ಣ, ಬಿ.ವಿ.ಶ್ರೀನಿವಾಸ್, ಗಂಗಾಧರಯ್ಯ, ಮಲ್ಲಣ್ಣರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ಅಂಜನಾದ್ರಿ ಟ್ರಸ್ಟ್ ಮುಖ್ಯಸ್ಥ ದೀರಜ್ ಮುನಿರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಎನ್ ನಾಗರಾಜು, ನಗರಾಧ್ಯಕ್ಷರಾದ ಎಚ್.ಎಸ್.ಶಿವಶಂಕರ್, ಬಿಜೆಪಿ ರಾಜ್ಯ ಮಹಿಳಾ ಕಾರ್ಯದರ್ಶಿ ವತ್ಸಲಾ ಜಗನ್ನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ವಕ್ತಾರೆ ಪುಷ್ಪಾಶಿವಶಂಕರ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜಾ, ಕೆ. ಎಸ್. ಮಂಜುನಾಥ್, ಜಿಲ್ಲಾ ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಶಿವಕುಮಾರ್, ನಗರಸಭೆ ಮಾಜಿ ಸದಸ್ಯರಾದ ಎಸ್.ಪ್ರಕಾಶ್, ಸುಶೀಲಮ್ಮ ರಾಘವ, ಪಿ.ಸಿ. ಲಕ್ಷ್ಮೀನಾರಾಯಣ,
ಹಾಗೂ ಹಿರಿಯ ಮುಖಂಡರಾದ ಲಕ್ಷ್ಮಣ್ ರಾವ್ ಮೋಹಿದಾರ್, ಎಂ.ಪಿ.ನಾಗರಾಜ್, ಸುಬ್ಬರಾಂ ಶೆಟ್ಟಿ, ವೆಂಕಟನಾರಾಯಣಪ್ಪ, ಬಸವರಾಜು, ಭದ್ರಣ್ಣ, ಕೆ.ಓ.ನಾಗರಾಜು, ಎಂ.ಆರ್.ಶ್ರೀನಿವಾಸ್, ರಾಂಸುಬ್ಬಯ್ಯ, ಸೋಮಲಿಂಗಪ್ಪ, ಕೆ.ಟಿ.ವೆಂಕಟಾಚಲಯ್ಯ, ಮಂಜು,ಉಮಾ ಮಹೇಶ್ವರಿ, ವಾಣಿ, ಮಂಜುಳಾ, ರಘುನಂದನ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಲೈಕ್ ಮಾಡಿ ಹಾಗೂ ಟ್ವಿಟರ್ ಫಾಲೋ ಮಾಡಿ, ಟೆಲಿಗ್ರಾಂ ಗುಂಪನ್ನು ಸೇರಿ.

