ಸಿಡ್ನಿ: ಮೈದಾನದಲ್ಲಿ ಪ್ರೇಕ್ಷಕರು ಭಾರತೀಯ ಆಟಗಾರರ ಜನಾಂಗೀಯ ನಿಂದನೆಯಿಂದ ತೀವ್ರ ವಿವಾದಕ್ಕೆ ಕಾರಣವಾಗಿದ್ದ, ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಹನುಮ ವಿಹಾರಿ ಮತ್ತು ಸಾಥ್ ನೀಡಿದ ಆರ್. ಅಶ್ವಿನ್ ನಡುವಿನ ತಾಳ್ಮೆಯುತ ಬ್ಯಾಟಿಂಗ್ ನಿಂದಾಗಿ ಡ್ರಾ ಕಂಡಿದೆ.
ಆಸ್ಟ್ರೇಲಿಯಾ ನೀಡಿದ 407 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 131 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 334 ರನ್ ಗಳಿಸುವ ಮೂಲಕ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
ವಿಹಾರಿ ತಾಳ್ಮೆಯುತ ಬ್ಯಾಟಿಂಗ್: ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಹನುಮ ವಿಹಾರಿ ತಾಳ್ಮೆಯುತ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ ಗಾಯಗೊಂಡರು ನೋವಿನ ನಡುವೆಯೂ ಬ್ಯಾಟಿಂಗ್ ನಡೆಸಿದರು.161 ಎಸೆತ ಎದುರಿಸಿದ ವಿಹಾರಿ 23 ರನ್ ಆದರೂ ತನ್ನ ಶ್ರೇಷ್ಠ ಇನ್ನಿಂಗ್ಸ್ ಆಡಿದರು.
ಮತ್ತೊಂದೆಡೆ ವಿಹಾರಿಗೆ ಉತ್ತಮ ಸಾಥ್ ನೀಡಿದ ಅಶ್ವಿನ್ 128 ಎಸೆತಗಳಲ್ಲಿ 39 ರನ್ ಗಳಿಸಿದರು.ಇದಕ್ಕೂ ಮೊದಲು ಪಂತ್ ಉತ್ತಮ ಇನ್ನಿಂಗ್ ಆಡಿದರು. ಏಕದಿನ ರೀತಿಯಲ್ಲಿ ಬ್ಯಾಟ್ ಬೀಸಿದ ಪಂತ್ 97 ರನ್ ಗಳಿಸಿದರು. ಮೂರು ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿದ ಪಂತ್ ಶತಕದ ಹೊಸ್ತಿಲಲ್ಲಿ ಔಟ್ ಆದರು.
ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದಿದ್ದು ಮುಂದಿನ ಪಂದ್ಯ ಬ್ರಿಸ್ಬೇನ್ ನಲ್ಲಿ ನಡೆಯಲಿದೆ.(ಪೊಟೋ ಕೃಪೆ ಇಂಡಿಯನ್ ಟೀಮ್)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಲೈಕ್ ಮಾಡಿ ಹಾಗೂ ಟ್ವಿಟರ್ ಫಾಲೋ ಮಾಡಿ, ಟೆಲಿಗ್ರಾಂ ಗುಂಪನ್ನು ಸೇರಿ.

