ದೊಡ್ಡಬಳ್ಳಾಪುರ: ರೂ 25 ಲಕ್ಷ ಅನುದಾನದಲ್ಲಿ ನಗರದ ಹಳೆ ಬಸ್ ನಿಲ್ದಾಣದ ರಸ್ತೆ ಕಾಮಗಾರಿಗೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು. (ವಿಡಿಯೋ ನೋಡಿ)
ಈ ವೇಳೆ ಮಾತನಾಡಿದ ಅವರು, ₹25ಲಕ್ಷ ಅನುದಾನದಲ್ಲಿ ಡಾ.ರಾಜ್‍ಕುಮಾರ್ ಪ್ರತಿಮೆ ಬಳಿಯಿಂದ ಸಿದ್ದಲಿಂಗಯ್ಯ ವೃತ್ತ ಮತ್ತು ಗಾಂಧಿನಗರ ವೃತ್ತದಿಂದ ಕೆನರಾ ಬ್ಯಾಂಕ್ ವರೆಗೆ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ನಗರೋತ್ಥಾನ ಯೋಜನೆಯಡಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ್ದ, ₹40 ಕೋಟಿ ಅನುದಾನದಲ್ಲಿ ಕೈಗೊಳ್ಳಲಾಗಿದ್ದ ಕಾಮಗಾರಿಗಳಲ್ಲಿ ಯುಜಿಡಿ ಹಾಗೂ ನೀರಿನ ಮೀಟರ್ ಅಳವಡಿಕೆ ಅಗೆಯಲಾದ ಗುಂಡಿಗಳನ್ನು ಮುಚ್ಚಿ, ಮರು ಡಾಂಬರಿಕರಣಗೊಳಿಸಲು ಉದ್ದೇಶಿಸಲಾಗಿದೆ.
ಅಲ್ಲದೆ ನಗರೋತ್ಥಾನ ಯೋಜನೆಯಲ್ಲಿ ಬಾಕಿ ಉಳಿದಿದ್ದ ಸುಮಾರು ₹3ಕೋಟಿ 75ಲಕ್ಷ ಅನುದಾನದಲ್ಲಿ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ರೂ 25ಕೋಟಿ ಅನುದಾನ ತಡೆಗೆ ಬೇಸರ: ನಗರದ ಅಭಿವೃದ್ಧಿಗೆ 2018ರಲ್ಲಿ ರಾಜ್ಯ ಸರ್ಕಾರ ರೂ 25ಕೋಟಿ ಅನುದಾನವನ್ನು ನೀಡಿತ್ತು, ಆದರೆ ನಗರದ ಕೆಲವರು ಅದಕ್ಕೆ ತಡಯೊಡ್ಡಿ ಕಾಮಗಾರಿ ನಡೆಸದಂತೆ ಮಾಡಿದ್ದಾರೆಂದು ಬೇಸರ ವ್ಯಕ್ತಪಡಿಸಿದ ಶಾಸಕ ಟಿ.ವೆಂಕಟರಮಣಯ್ಯ ಮುಂದಿನ ದಿನಗಳಲ್ಲಿ ಆ ಅನುದಾನವನ್ನು ತರಲು ಯತ್ನಿಸಲಾಗುವುದೆಂದರು.
ಪ್ರತಿ ಶುಕ್ರವಾರ ನಗರಸಭೆಯಲ್ಲಿ ಕುಂದುಕೊರತೆ ಸಭೆ: ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತಿ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಕಳೆದ ವಾರದಿಂದ ಆರಂಭಿಸಲಾಗಿದೆ, ನಂತರ ವಾರ್ಡ್ ವಾರು ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಲಾಗುವುದೆಂದರು.
ಈ ವೇಳೆ ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ಎಇಇ ಶೇಖ್ ಫಿರೋಜ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಉಪಾಧ್ಯಕ್ಷ ಸೋಮರುದ್ರ ಶರ್ಮ, ಮಾಜಿ ಸದಸ್ಯ ಹೇಮಂತರಾಜ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ, ಗ್ರಾಪಂ ಸದಸ್ಯೆ ನಾಗರತ್ನಮ್ಮ, ನಗರ ಮಹಿಳಾ ಘಟಕದ ಅಧ್ಯಕ್ಷೆ ಪ್ರಭ, ಕಿಸಾನ್ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮುದಾ, ಮುಖಂಡರಾದ ರಾಮಾಂಜಿನಪ್ಪ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಲೈಕ್ ಮಾಡಿ ಹಾಗೂ ಟ್ವಿಟರ್ ಫಾಲೋ ಮಾಡಿ, ಟೆಲಿಗ್ರಾಂ ಗುಂಪನ್ನು ಸೇರಿ.

