ದೊಡ್ಡಬಳ್ಳಾಪುರ: ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಬಹಳಷ್ಟು ಸೌಲಭ್ಯಗಳನ್ನು ನೀಡುವ ಮೂಲಕ ದ್ವನಿ ಇಲ್ಲದ ಜನರಿಗೆ ದ್ವನಿಯಾಗಲು ಬಿಜೆಪಿ ಪಕ್ಷ ಬೆನ್ನೆಲುಬಾಗಿ ನಿಂತಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರ ಬಾಬು ತಿಳಿಸಿದರು. (ವಿಡಿಯೋ ನೋಡಿ)
ನಗರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಕಾರ್ಯಕಾರಣಿ ಸಭೆಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಸ್ಸಿ, ಎಸ್ಟಿ ಅಯೋಗಕ್ಕೆ ಇರುವಂತೆ ಸಂವಿಧಾನ ನೆಲಗಟ್ಟು ಹಿಂದುಳಿದ ವರ್ಗಗಳಿಗೆ ಇಲ್ಲವಾಗಿತ್ತು, ಮೋದಿಯವರು ಪ್ರಧಾನಿಯಾದ ಬಳಿಕ ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಸಂವಿಧಾನ ನೆಲಗಟ್ಟು ದೊರಕಿದ್ದು, ಕೇಂದ್ರದಲ್ಲಿ ರೋಹಿಣಿ ಆಯೋಗ ರಚನೆ ಮಾಡಲಾಗಿದೆ, ಸಹಕಾರ ಸಂಘಗಳಲ್ಲಿ ಸೌಲಭ್ಯ ದೊರಕಲಾರಂಭಿಸಿದೆ.
ಹಿಂದುಳಿದ ವರ್ಗಗಳಿಗಿರುವ ಸೌಲಭ್ಯಗಳ ಮಾಹಿತಿ ಕೊರೆತೆಯ ಕಾರಣ ಅವರಿಗಿರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಕಾರ್ಯಕಾರಣಿ ಸಭೆಯ ಜೊತೆಯಲ್ಲಿಯೇ, ಸ್ಥಳೀಯ ಹಿಂದುಳಿದ ವರ್ಗಗಳ ಜನರ ಜೊತೆ ಚಿಂತನ ಮಂಥನ ಸಭೆ ನಡೆಸಿ, ಸಮಸ್ಯೆಯನ್ನು ಕೇಳಿ ತಿಳಿದು ಅದಕ್ಕೆಂದಿರುವ ಪರಿಹಾರವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಹಿಂದುಳಿದ ವರ್ಗಗಳಿಗೆ ತಲುಪಿಸುವುದು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ.
ಹಿಂದುಳಿದ ವರ್ಗಗಳ ಸಮುದಾಯ ಅಸಂಘಟಿತ ವಲಯವಾಗಿದ್ದು ಅವರನ್ನು ಜಾಗೃತರನ್ನಾಗಿಸಲು ಜಿಲ್ಲಾ ಮಟ್ಟದಲ್ಲಿ ಒಬಿಸಿ ಮೋರ್ಚಾ ಮುಖಂಡರಿಗೆ ಜವಬ್ದಾರಿ ನೀಡಲಾಗುತ್ತಿದೆ, ಈ ಕಾರಣಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು ಪ್ರಸ್ತುತ 14 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು, ಗೋವಿಂದರಾಜು, ಕೋಶಾಧ್ಯಕ್ಷ ಗೋವಿಂದ ನಾಯಕ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬೂದಗೆರೆ.ನಾರಾಯಣಸ್ವಾಮಿ, ವಕ್ತಾರೆ ಪುಷ್ಪಾಶಿವಶಂಕರ್, ಪ್ರಧಾನ ಕಾರ್ಯದರ್ಶಿ ಸುಬ್ಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ನಗರ ಅಧ್ಯಕ್ಷ ಮಂಜುನಾಥ್, ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕ ಶಿವಾನಂದರೆಡ್ಡಿ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.

