ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಮಾಸಿಕ ಗೌರವಧನದ ಆಧಾರದ ಮೇಲೆ 01 ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಹಾಗೂ 01 ವಾಹನ ಚಾಲಕರ ಹುದ್ದೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಾಸಿಕ ಗೌರವಧನ ಹಾಗೂ ಸಾರಿಗೆ ವೆಚ್ಚ ಒಳಗೊಂಡಂತೆ 11 ತಿಂಗಳ ಅವಧಿಗೆ ಡಾಟಾ ಎಂಟ್ರಿ ಆಪರೇಟರ್ 1 ಹುದ್ದೆ
ಮಾಸಿಕ ರೂ.13,050/- ಹಾಗೂ ವಾಹನ ಚಾಲಕ 1 ಹುದ್ದೆ ಮಾಸಿಕ ರೂ.10,050/- ಅನ್ನು ಪಾವತಿಸಲಾಗುವುದು.ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರವುಳ್ಳ ಅರ್ಜಿಯನ್ನು ಭಾವಚಿತ್ರ ಮತ್ತು ನಿಗದಿತ ದಾಖಲೆಗಳೊಂದಿಗೆ 2021ರ ಜನವರಿ 31 ರೊಳಗೆ ಸಲ್ಲಿಸುವುದು. ವಿದ್ಯಾರ್ಹತೆ ಮತ್ತು ಅನುಭವ ಹಾಗೂ ಹೆಚ್ಚಿನ ಮಾಹಿತಿಗಾಗಿ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕೊಠಡಿ ಸಂಖ್ಯೆ-102, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರಾದ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.

