
ದೊಡ್ಡಬಳ್ಳಾಪುರ: ಕೋವಿಡ್-19 ಲಸಿಕೆ ಕುರಿತು ಸಾರ್ವಜನಿಕರಿಗಿರುವ ಆತಂಕವನ್ನು ದೂರಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ಸಲಹೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಲಸಿಕೆ ವಿತರಣೆ ಕುರಿತು ಮಾತನಾಡಿದ ಅವರು, ಕರೊನಾ ಲಸಿಕೆ ಕುರಿತು ಮಾದ್ಯಮಗಳಲ್ಲಿ ಬರುತ್ತಿರುವ ವರದಿಗಳಿಂದ ಸಾರ್ವಜನಿಕರು ಆತಂಕ್ಕೀಡಾಗಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಅವರಿಗೆ ಸೂಚಿಸಿದರು.
ಮೊದಲ ಹಂತದಲ್ಲಿ ಕರೊನಾ ವಾರಿಯರ್ಸ್ ಗಳಿಗೆ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಸಿದೆ. ಆದರೆ ಸಾರ್ವಜನಿಕರಿಗೂ ಲಸಿಕೆಯನ್ನು ಉಚಿತವಾಗಿ ನೀಡುವಂತೆ ಸದನದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದೆಂದರು.
ಲಸಿಕ ವಿತರಣೆ ಕುರಿತು ಸಭೆಗೆ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಮೊದಲ ಹಂತದ ಕೋವಿಡ್-19 ಲಸಿಕೆಯನ್ನು ಶನಿವಾರದಿಂದ ತಾಲೂಕಿನ 1390 ಮಂದಿಗೆ ನೀಡಲು ಆರಂಭಿಸಲಾಗುತ್ತಿದೆ.
ತಾಲೂಕಿನಲ್ಲಿ ಮೊದಲ ಹಂತದ ಕೋವಿಡ್ ಲಸಿಕೆ ವಿತರಿಸಲು ಕೋವಿಡ್ ವಾರಿಯರ್ಸ್ ಗಳಾದ ಆರೋಗ್ಯ ಇಲಾಖೆಯ 880, ಖಾಸಗಿ ಕ್ಷೇತ್ರದ ವೈದ್ಯರು ಮತ್ತು ಸಿಬ್ಬಂದಿಗಳಿಗೆ 510 ಮಂದಿ ಸೇರಿದಂತೆ 1390 ಮಂದಿಗೆ ಲಸಿಕೆ ನೀಡಲಾಗುತ್ತಿದ್ದು, ಕೋವಿಡ್ ಲಸಿಕೆ ನೀಡಲು ಸಾರ್ವಜನಿಕ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಪರಮೇಶ್ ಮಾತನಾಡಿ, ಕರೊನಾ ಸೋಂಕಿನ ಲಸಿಕೆ ಕುರಿತು ಕೆಲ ಪ್ರಸಾರ ಮಾಧ್ಯಮಗಳು ಆತಂಕ ಸೃಷ್ಟಿಸುತ್ತಿವೆ. ಹಾಗೂ ದರ ನಿಗದಿ ಮಾಡಿದೆ ಎನ್ನಲಾಗಿದೆ, ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಜನತೆ ಕಷ್ಟದಲ್ಲಿದ್ದು ಲಸಿಕೆಗೆ ಶಾಸಕರ ನೇತೃತ್ವದಲ್ಲಿ ಉಚಿತವಾಗಿ ತಾಲೂಕಿನ ಜನತೆ ದೊರಕಿಸಬೇಕಿದೆ. ಅಲ್ಲದೆ, ಲಸಿಕೆ ಕುರಿತು ವಾಸ್ತವವನ್ನು ಜನರಿಗೆ ತಿಳಿಸಬೇಕೆಂದರು.
ಸಭೆಯಲ್ಲಿ ತಹಶಿಲ್ದಾರ್ ಟಿ.ಎಸ್.ಶಿವರಾಜ್, ಇಒ ಮುರುಡಯ್ಯ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

