
ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೆರೆಯಲಾದ 6 ಕೋವಿಡ್ ಲಸಿಕೆ ವಿತರಣಾ ಕೇಂದ್ರಗಳಲ್ಲಿ, ಮೊದಲ ದಿನವಾದ ಇಂದು ನೀಡಲಾದ 507 ಗುರಿಯಲ್ಲಿ 260 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಎರಡು ಲಸಿಕಾ ಕೇಂದ್ರಗಳಲ್ಲಿ 173 ಗುರಿಯಲ್ಲಿ 85 ಮಂದಿಗೆ, ದೇವನಹಳ್ಳಿ ತಾಲ್ಲೂಕಿನ ಎರಡು ಲಸಿಕಾ ಕೇಂದ್ರಗಳಲ್ಲಿ ನೀಡಲಾದ 129 ಗುರಿಯಲ್ಲಿ 52 ಆರೋಗ್ಯ ಕಾರ್ಯಕರ್ತರಿಗೆ, ಹೊಸಕೋಟೆ ತಾಲ್ಲೂಕಿನ ಒಂದು ಲಸಿಕಾ ಕೇಂದ್ರದಲ್ಲಿ 100 ಗುರಿಯಲ್ಲಿ 69 ಹಾಗೂ ನೆಲಮಂಗಲ ತಾಲ್ಲೂಕಿನ ಒಂದು ಲಸಿಕಾ ಕೇಂದ್ರದಲ್ಲಿ 100 ಗುರಿಯಲ್ಲಿ 54 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುಳಾದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

