
ಚಿಕ್ಕಬಳ್ಳಾಪುರ: ಜಿಲ್ಲಾ ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆನಡೆಸಿ 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಸರಕು ಸರಂಜಾಮುಗಳನ್ನು ವಶ ಪಡಿಸಿಕೊಂಡು ಓರ್ವನ ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾದೂರಿನಲ್ಲಿ ನಡೆದಿದೆ.
ತಾದೂರು ಗ್ರಾಮದ ರೇಷ್ಮೆ ಶೆಡ್ ನಲ್ಲಿ ನಕಲಿ ಮದ್ಯ ತಯಾರಿಸಿ ವಿವಿಧ ಬ್ರ್ಯಾಂಡ್ ಗಳ ಲೇಬಲ್ ಹಾಕಿ ಮದ್ಯ ತಯಾರಿಕಾ ಘಟಕವನ್ನೇ ತಯಾರಿಸಿದ್ದರು ಎನ್ನಲಾಗಿದೆ.
ದಾಳಿಯಲ್ಲಿ 37,800 ಲೀಟರ್ ನಕಲಿ ಮಧ್ಯ ಹಾಗೂ 1290 ಲೀಟರ್ ಸ್ಪೀರಿಟ್ ಜಪ್ತಿ ಮಾಡಿದ ಅಬಕಾರಿ ಅಧಿಕಾರಿಗಳು ಆರೋಪಿ ಟಿ.ಎಂ. ಮಂಜುನಾಥ್ ನನ್ನು ಬಂಧಿಸಿದ್ದು, ಉಳಿದ ಆರೋಪಿಗಳ ತಲಾಷೆಯಲ್ಲಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಅಬಕಾರಿ ಉಪ ಆಯುಕ್ತ ಬಿ.ಪಿ. ನರೇಂದ್ರಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು ವಿವಿಧ ಬ್ರ್ಯಾಂಡ್ ಗಳ ನಕಲಿ ಮಧ್ಯ ತಯಾರಿಸಿ ತಮಿಳುನಾಡಿಗೆ ಸರಬರಾಜು ಮಾಡುತ್ತಿರುವುದಾಗಿ ಆರೋಪಿ ಹೇಳಿದ್ದಾನೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

