
ದೊಡ್ಡಬಳ್ಳಾಪುರ: ನಗರಸಭೆಯ 15ನೇ ಹಣಕಾಸು ಯೋಜನೆ ಮತ್ತು ನಗರಸಭಾ ನಿಧಿಯಡಿಯಲ್ಲಿ ನಗರದ 18 ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನಗರಸಭೆಯ ಯೋಜನೆಯಡಿಯಲ್ಲಿ ರೂ.1ಕೋಟಿ 75ಲಕ್ಷದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿ ಒತ್ತು ನೀಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾಲೂಕಿನ ಅಭಿವೃದ್ಧಿಗೆ ಅನುಧಾನ ನೀಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ನಗರಸಭೆ ಪೌರಾಯುಕ್ತ ರ.ಏಶ್ ಎಸ್.ಸುಣಗಾರ್, ಎಇಇ ಶೇಕ್ ಫಿರೋಜ್, ಇಂಜಿನಿಯರ್ ಚಂದ್ರಶೇಖರ್, ಪರಿಸರ ವಿಭಾಗದ ವೀರಣ್ಣ, ಮಾಜಿ ನಗರಸಭೆ ಅಧ್ಯಕ್ಷ ಕೆ.ಪಿ.ಜಗನಾಥ್, ಮಾದರ ಚನ್ನಯ್ಯ ಮಹಾಸಭಾದ ವರಿಷ್ಠ ಮಂಡಳಿ ಅಧ್ಯಕ್ಷ ಮಾ.ಮುನಿರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆದಿತ್ಯ ನಾಗೇಶ್, ನಗರಘಟದ ಅಧ್ಯಕ್ಷ ಅಂಜನಮೂರ್ತಿ, ಮುಖಂಡರಾದ ಬ್ಯಾಂಕ್ ಆಂಜನಪ್ಪ, ಚಂದ್ರಶೇಖರ್, ರಾಮಾಂಜಿ, ಲಕ್ಷ್ಮೀನಾರಾಯಣ್, ಹರೀಶ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಿ ನಮ್ಮೊಂದಿಗೆ ಜೊತೆಯಾಗಿ.

