
ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯದ ವತಿಯಿಂದ ಫೆ.25ರಂದು ಸಪ್ತಪದಿ ಯೋಜನೆಯಡಿ ಸರಳ ಸಾಮೂಹಿಕ ವಿವಾಹಗಳನ್ನು ನಡೆಸಲು ಉದ್ದೇಶಿಸಿದ್ದು, ಅರ್ಹ ವಧೂವರರು ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ನಿರಂತರವಾಗಿ ನಡೆಸಲು ಉದ್ದೇಶಿಸಲಾಗಿದೆ. ಅದರಂತೆ ಫೆ.25ರಂದು ಬೆಳಿಗ್ಗೆ 10.30ರಿಂದ11ರವೆರೆಗಿನ ಲಗ್ನದಲ್ಲಿ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ನಡೆಸಲಾಗುವುದು.
ವಧು ವರರು ನೋಂದಾಯಿಸಿಕೊಳ್ಳಲು ಫೆ.5 ಕೊನೆಯ ದಿನವಾಗಿದೆ. ವಧು ವರ ವಿವರಗಳನ್ನು ಫೆ.6ರಂದು ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು ಫೆ.8 ಕೊನೆಯ ದಿನವಾಗಿದ್ದು, ಫೆ.9ರಂದು ಅಂತಿಮ ವಧು ವರರ ಪಟ್ಟಿಯನ್ನು ಪ್ರಕಟಿಸಲಿದೆ.
ವಿವಾಹವಾಗುವ ವರನಿಗೆ ವಸ್ತ್ರ ಹಾಗೂ ಹೂವಿನ ಹಾರಕ್ಕಾಗಿ 5 ಸಾವಿರ, ವಧುವಿಗೆ ದಾರೆ ಸೀರೆ, ವಸ್ತ್ರ, ಹೂವಿನ ಹಾರಕ್ಕಾಗಿ 10 ಸಾವಿರ, ಹಾಗೂ ವಧುವಿಗೆ 40 ಸಾವಿರ ಮೌಲ್ಯದ ಚಿನ್ನದ ತಾಳಿ ಹಾಗೂ ಎರಡು ಚಿನ್ನದ ಗುಂಡು ಸೇರಿ ವಧು ವರರಿಗೆ 55 ಸಾವಿರ ಪ್ರೋತ್ಸಾಹ ಧನವನ್ನು ದೇವಾಲಯದ ವತಿಯಿಂದ ಭರಿಸಲಾಗುವುದು. ವಧು ವರರು ಹಾಗೂ ಪೋಷಕರು ಕಡ್ಡಾಯವಾಗಿ ವಿವಾಹದ ಷರತ್ತುಗಳನ್ನು ಪಾಲಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ. ಹೆಚ್ಚಿನ ವಿವರಗಳಿಗಾಗಿ ಘಾಟಿ ಸುಬ್ರಹ್ಮಣ್ಯ ದೇವಾಲಯದ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

