
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಛೇರಿಯಲ್ಲಿ ಘಟನೆ ನಡೆದಿದೆ.
ಕಚೇರಿ ಕಸ ಗುಡಿಸಲು ದಿನಗೂಲಿ ನೌಕರನಾಗಿ ನೇಮಕವಾಗಿದ್ದ ಶಿಡ್ಲಘಟ್ಟ ನಗರದ ಎಡಿ ಕಾಲೋನಿ ನಿವಾಸಿ ಲಕ್ಷ್ಮಿಪತಿ(28) ನೇಣಿಗೆ ಶರಣಾದ ದುರ್ದೈವಿ.
ಆತ್ಮಹತ್ಯೆಗೆ ಶರಣಾಗಿರುವ ಮೃತ ದುರ್ದೈವಿ ಲಕ್ಷ್ಮಿಪತಿ ಆಟೋ ಓಡಿಸಿಕೊಂಡು ಮತ್ತು ರೇಷ್ಮೆ ಬಿತ್ತನೆ ಕೋಠಿ ಕಚೇರಿಯಲ್ಲಿ ಕಸ ಗುಡಿಸುವ
ದಿನಗೂಲಿ ನೌಕರನಾಗಿ ಜೀವನ ನಡೆಸುತ್ತಿದ್ದ. ಈತನಿಗೆ ಕುಡಿತದ ಚಟವಿದ್ದು ಇವರಿಗೆ ಒಂದು ಗಂಡು ಇಬ್ಬರು ಹೆಣ್ಣುಮಕ್ಕಳಿದ್ದು ಜೀವನ ನಡೆಸಲು ಕಷ್ಟಕರವಾಗಿತ್ತು ಎನ್ನಲಾಗಿದೆ.
ಮಂಗಳವಾರ ಸಂಜೆ ಬಿತ್ತನೆ ಕೋಠಿಗೆ ಹೋಗಿದ್ದ ಕಚೇರಿಯ ಪ್ಯಾನ್ ಗೆ ನೇಣು ಹಾಕಿ ಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೃತ ಲಕ್ಷ್ಮಿಪತಿ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ಶಿಡ್ಲಘಟ್ಟ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

