
ಬೆಂಗಳೂರು: ಜೂನ್ 14ರಿಂದ 25ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಚಿಂತಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.14ರಂದು ಪ್ರಥಮ ಭಾಷೆ ಕನ್ನಡ, 16ರಂದು ಗಣಿತ, ಸಮಾಜಶಾಸ್ತ್ರ, 18ರಂದು ಇಂಗ್ಲಿಷ್ ಅಥವಾ ಕನ್ನಡ, 21ರಂದು ವಿಜ್ಞಾನ, 23ರಂದು ತೃತಿಯ ಭಾಷೆ ಹಿಂದಿ, 25ರಂದು ಸಮಾಜ ವಿಜ್ಞಾನ, ಪರಿಕಲ್ಪನೆ ನಡೆಯಲಿದೆ.
ಪ್ರಥಮ ಭಾಷೆಯ ಪರೀಕ್ಷೆ 3.15 ಗಂಟೆ ಹಾಗೂ ಇನ್ನುಳಿದ ವಿಷಯಗಳಿಗೆ 3ಗಂಟೆಗೆ ಕಾಲಾವಕಾಶ ಇರಲಿದೆ ಎಂದು ತಿಳಿಸಿದ್ದಾರೆ.
ಇದು ಕೇವಲ ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಪರೀಕ್ಷೆ ವೇಳಾಪಟ್ಟಿ ಕುರಿತು ಆಕ್ಷೇಪ ಸಲ್ಲಿಸಲು ಫೇ.26ರ ವರೆಗೆ ಅವಕಾಶವಿದೆ ಎಂದು ಸಚಿವರು ತಿಳಿಸಿದ್ದಾರೆ. (ಸಂಗ್ರಹ ಚಿತ್ರ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

