
ಹಾಸನ: ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಆದೇಶಿಸಿದ್ದಾರೆ.
ನಗರದ ಬಿಎಂ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ಜ.20ರ ಮಧ್ಯರಾತ್ರಿ ಅಪರಿಚಿತರು ರೈಲ್ವೆ ನೌಕರರೊಬ್ಬರಿಂದ 10 ಸಾವಿರ ನಗದು ಹಾಗೂ ಮೊಬೈಲ್ ದರೋಡೆ ಮಾಡಿದ್ದರು. ಈ ಸಂಬಂಧ ಹಾಸನ ನಗರ ಠಾಣೆಗೆ ದೂರು ನೀಡಲು ರೈಲ್ವೆ ನೌಕರ ಶಾಂತಿಭೂಷಣ್ ತೆರಳಿದ್ದರು. ಆದರೆ ದೂರು ಸ್ವೀಕರಿಸದೆ ಬಡಾವಣೆ ಠಾಣೆಗೆ ಹೋಗಿ ಎಂದು ಸೆಂಟ್ರಿ ಹಾಗು ಎಸ್ಎಚ್ಒ ಕಳುಹಿಸಿದ್ದರು. ನಂತರ ಬಡಾವಣೆ ಠಾಣೆಗೆ ದೂರು ನೀಡಲು ಹೋದರು. ಅಲ್ಲಿನ ಸೆಂಟ್ರಿ ಹಾಗು ಎಸ್ಎಚ್ಒ ಸಹ ದೂರು ಸ್ವೀಕರಿಸಿರಲಿಲ್ಲ.
ಈ ಬಗ್ಗೆ ರೈಲ್ವೆ ನೌಕರ ಶಾಂತಿಭೂಷಣ್ ಎಸ್ಪಿಗೆ ದೂರು ನೀಡಿದ್ದು, ದೂರು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ ಎರಡೂ ಠಾಣೆಯ ಇಬ್ಬರು ಸೆಂಟ್ರಿ ಹಾಗೂ ಇಬ್ಬರು ಎಸ್ಎಚ್ಒ ರನ್ನು ಅಮಾನತುಗೊಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

