
ನವದೆಹಲಿ: ಉತ್ತರ ಪ್ರದೇಶ ಗಡಿ ಭಾಗದಲ್ಲಿ ನಡೆಸುತ್ತಿರುವ ರೈತ ಸಂಘಟನೆಗಳಿಗೆ ಪ್ರತಿಭಟನೆಗಳನ್ನು ಅಂತ್ಯಗೊಳಿಸಿ ಜಾಗ ತೆರವು ಮಾಡಲು ಗಾಜಿಯಾಬಾದ್ ಜಿಲ್ಲಾಡಳಿತ ಗುರುವಾರ ರಾತ್ರಿಯವರೆಗೂ ಕಾಲಾವಕಾಶ ನೀಡಿದೆ.
ಉತ್ತರ ಪ್ರದೇಶದ ಪಾಗಪಾತ್‌ನಲ್ಲಿ ಇಂದು ರೈತರ ಪ್ರತಿಭಟನೆ ಅಂತ್ಯಗೊಂಡಿದೆ. ಕಳೆದ ವರ್ಷ ಡಿ.19ರಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಪೊಲೀಸ್ ಬಲವನ್ನು ಬಳಸುವ ಮೂಲಕ ಪ್ರತಿಭಟನೆ ಅಂತ್ಯಗೊಳಿಸಲಾಗಿದೆ’ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ. ಆದರೆ, ಮಾತುಕತೆಯ ಮೂಲಕ ರೈತರನ್ನು ಬುಧವಾರ ರಾತ್ರಿ ಮನೆಗಳಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಗಾಜಿಪುರ ಗಡಿಭಾಗದಲ್ಲಿ ರೈತರಿಗೆ ಸೆಕ್ಷನ್ 133ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಗಾಜಿಯಾಬಾದ್‌ನ ಎಡಿಎಂ ಶೈಲೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ. ಈ ನಡುವೆ ಇಂದು ರಾತ್ರಿ ಗಾಜಿಪುರ ಗಡಿಯಲ್ಲಿ ಧರಣಿ ಕೊನೆಯಾಗಲಿದೆ ಎಂದು ಭಾರತೀಯ ಕಿಸಾನ್ ಸಂಘಟನೆಯ (ಬಿಕೆಯು) ಮುಖಂಡ ನರೇಶ್ ಟಿಕೈಯ್ತ್ ಮುಜಾಫರ್‌ನಗರದಲ್ಲಿ ಘೋಷಿಸಿದ್ದಾರೆ. ಆದರೆ, ಪ್ರತಿಭಟನೆ ಮುಂದುವರಿಯಲಿದೆ ಎಂದು ನರೇಶ್ ಅವರ ಸೋದರ ರಾಕೇಶ್ ಹೇಳಿರುವುದು ಪ್ರತಿಭಟನಾಕಾರರಲ್ಲಿ ಗೊಂದಲ ಸೃಷ್ಟಿಸಿದೆ.
ಜ.26ರಂದು ನಡೆ ಗಣರಾಜ್ಯೋತ್ಸವದಂದು ನಡೆದ ರೈತರ ಪೆರೇಡ್, ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ಕೆಂಪು ಕೋಟೆಗೆ ನುಗ್ಗಿದ್ದು ಹಾಗೂ ಪೊಲೀಸರ ಜೊತೆಗೆ ಘರ್ಷಣೆ ವೇಳೆ ಸುಮಾರು 400 ಪೊಲೀಸರು ಗಾಯಗೊಂಡಿರುವುದು ವರದಿಯಾಗಿದೆ. ಕೆಂಪು ಕೋಟೆಯ ಗೋಪುರಗಳಲ್ಲಿ ಅನ್ಯ ಧ್ವಜಗಳನ್ನು ಹಾರಿಸಿದ್ದಲ್ಲದೆ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ಹಾನಿಯುಂಟು ಮಾಡಿದ್ದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ದೆಹಲಿಯಲ್ಲಿ ಪೊಲೀಸರು ಘಟನೆಗೆ ಕಾರಣರೆನ್ನಲಾಗುತ್ತಿರುವ ರೈತ ಮುಖಂಡರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಪೆರೇಡ್‌ಗೆ ನಿಗದಿ ಪಡಿಸಿದ್ದ ನಿಗಮಗಳನ್ನು ಪಾಲಿಸದಿರುವುದಕ್ಕಾಗಿ, ನಿಮ್ಮ ವಿರುದ್ಧ ಏಕೆ ಕಾನೂನು ರೀತಿಯ ಕ್ರಮಕೈಗೊಳ್ಳಬಾರದು ಎಂದು ಮೂರು ದಿನಗಳ ಒಳಗಾಗಿ ಪ್ರತಿಕ್ರಿಯೆ ದಾಖಲಿಸುವಂತೆ ಬಿಕೆಯುನ ವಕ್ತಾರ ರಾಕೇಶ್ ಟಿಕೈಯ್ತ್ ಅವರಿಗೆ ಪೊಲೀಸರು ಸೂಚಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

