
ಬೆಂಗಳೂರು: ಫೆಬ್ರವರಿ 1 ರಿಂದ 9 ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಎಸ್ಎಲ್ಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ಮಾಡಿ ಮಾತನಾಡಿರುವ ಅವರು, ರೆಗ್ಯುಲರ್ ಆಗಿ ಶಾಲೆಗಳನ್ನ ನಡೆಸುವಂತೆ ಒತ್ತಾಯಗಳು ಕೇಳಿಬಂದಿವೆ. ಹೀಗಾಗಿ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದವರ ಜೊತೆಯೂ ಚರ್ಚೆ ಮಾಡಿದ್ದೇನೆ. 6-9 ವಿದ್ಯಾಗಮ ರೆಗ್ಯುಲರ್ ಮಾಡಿ ಎಂಬ ಅಭಿಪ್ರಾಯ ಬಂದಿದೆ.
ಶಾಲಾ ಶಿಕ್ಷಕರ ಸಂಘಗಳು ಸಹ 1-9 ನೇ ತರಗತಿವರೆಗೆ ಶಾಲೆ ತೆರೆಯುವಂತೆ ಒತ್ತಾಯಿಸಿವೆ. ಶಾಲೆ ಆರಂಭಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಚರ್ಚಿಸುವಾಗ ಮೂರು ಸಂಗತಿಗಳನ್ನ ಮುಂದಿಡಲಾಗಿತ್ತು. ಫೆ.1 ರಿಂದ 6 ರಿಂದ 9 ನೇ ತರಗತಿ ಮತ್ತು 11ನೇ ತರಗತಿ ಪ್ರಾರಂಭ ಮಾಡಲು ಚರ್ಚೆ ಮಾಡಲಾಗಿತ್ತು. 1 ರಿಂದ 5ನೇ ತರಗತಿ ವರೆಗೆ ವಿದ್ಯಾಗಮ ವಿಸ್ತರಣೆ ಮಾಡುವ ಬಗ್ಗೆಯೂ ಸಮಿತಿಯನ್ನು ಕೇಳಲಾಗಿತ್ತು.
ಈ ಎಲ್ಲಾ ಚರ್ಚೆಗಳ ಬಳಿಕ 9, 10, 11, 12 ನೇತರಗತಿಗಳಿಗೆ ರೆಗ್ಯುಲರ್ ತರಗತಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಅದರಂತೆ ಮುಂದಿನ ಫೆಬ್ರವರಿ 1 ರಿಂದ 9 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

