
ದೊಡ್ಡಬಳ್ಳಾಪುರ: ಕರೊನಾ ಸಂಧರ್ಭದಲ್ಲಿಯೂ ಸಂಬಳ ನೀಡಿರುವ ಸರ್ಕಾರದ ಋಣ ನಮ್ಮೆಲ್ಲರ ಮೇಲಿದ್ದು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಮಕ್ಕಳ ಜೀವನ ರೂಪಿಸುವ ಹೊಣೆಯನ್ನು ಶಿಕ್ಷಕರು ಹೊರಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ತಿಳಿಸಿದರು.
ತಾಲೂಕಿನ ಕಂಟನಕುಂಟೆ ಶಾಲೆಯ ಆವರಣದಲ್ಲಿ ತೂಬಗೆರೆ ಹೋಬಳಿ ವ್ಯಾಪ್ತಿಯ ಶಿಕ್ಷಕರಿಗಾಗಿ ಆಯೋಜಿಸಿದ್ದ, ಶಿಕ್ಷಣ ಅದಾಲತ್ ಹಾಗೂ ಗುರು ಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರಿಗೆ ಆಡಳಿತಾತ್ಮಕವಾಗಿ ಉಂಟಾಗುವ ಸಮಸ್ಯೆಗಳನ್ನು ಬಗೆ ಹರಿಸಲು ಇಲಾಖೆ ಯಾವಾಗಲು ಸಿದ್ದವಿದೆ. ಇದೇ ಕಾರ್ಯಕ್ರಮವನ್ನು ತಾಲೂಕಿನ ಉಳಿದ ಹೋಬಳಿಗಳಲ್ಲಿಯೂ ಆಯೋಜಿಸಿ ಸಮಸ್ಯೆ ಬಗೆ ಹರಿಸಲು ಸಿದ್ದತೆ ನಡೆಸಿರುವುದರಿಂದ ಶಿಕ್ಷಕರು ಕಚೇರಿಗೆ ಬರುವುದು ತಪ್ಪಲಿದೆ. ಆದ್ದರಿಂದ ಶಿಕ್ಷಕರು ತಮ್ಮ ಜವಬ್ದಾರಿ ಅರಿತು ಮಕ್ಕಳ ಶೈಕ್ಷಣಿಕ ಚಟುವಟಿಕೆ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ.
ಕೆಲವೇ ದಿನಗಳಲ್ಲಿ ಯಾಥಾ ಸ್ಥಿತಿಯಂತೆ ಶಾಲೆಗಳು ಆರಂಭವಾಗಲಿದ್ದು, ಕರೊನಾ ಸೋಂಕು ಹರಡದಂತೆ ತಡೆಯಲು ಘೋಷಿಸಲಾದ ಲಾಕ್‌ಡೌನ್ ಹಿನ್ನೆಲೆ ಕಲಿಕೆಯಿಂದ ವಂಚಿತರಾಗಿರುವ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಹೊಣೆಯನ್ನು ಹೊರಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೈಕುಮಾರ್, ಉಪಧ್ಯಕ್ಷ ಎ.ವಿ.ಚಂದ್ರು, ಕಾರ್ಯದರ್ಶಿ ಎಸ್.ವಿ.ವಸಂತ್ ಗೌಡ, ಖಜಾಂಚಿ ನರಸಿಂಹಮೂರ್ತಿ, ಪ್ರತಿನಿಧಿ ಮಲ್ಲಿಕಾರ್ಜುನರೆಡ್ಡಿ, ಸರ್ಕಾರಿ ನೌರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ರಾಜಶೇಖರ್, ತಾಲೂಕು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಧನಂಜಯ, ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಬಸವರಾಜ್, ಸಿಬ್ಬಂದಿ ಮತ್ತಿತರಿದ್ದರು.
ಈ ವೇಳೆ ಸುಮಾರು 150 ಮಂದಿ ಶಿಕ್ಷಕರು ಭಾಗವಹಿಸಿ, ಸ್ಥಳದಲ್ಲಿಯೇ ಇಲಾಖಾವಾರು ಸಮಸ್ಯೆ ಬಗೆಹರಿಸಿಕೊಂಡರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

