
ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ಗ್ರಾಮಪಂಚಾಯಿತಿ ಆವರಣದಲ್ಲಿ ತ್ಯಾಜ್ಯ ತುಂಬಿರುವ ವಾಹನ ನಿಂತಿದ್ದು, ಸಂಗ್ರಹ ಮಾಡಿದ ತ್ಯಾಜ್ಯವನ್ನು ವಿಲೇವಾರಿ ಮಾಡದೆ ರಜೆ ತೆರಳಿರುವ ಗ್ರಾಪಂ ಸಿಬ್ಬಂದಿಗಳ ಕಾರ್ಯವೈಖರಿ ಗ್ರಾಮಸ್ಥರಲ್ಲಿ ಆಕ್ರೋಶವನ್ನು ಉಂಟುಮಾಡಿದೆ.
ಘಟನೆಯ ವಿವರ: ದೊಡ್ಡತುಮಕೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿಸಲು ವಿವಿಧ ಯೋಜನೆಯಡಿಯಲ್ಲಿ ತ್ಯಾಜ್ಯ ವಿಲೆವಾರಿ ಘಟಕ ಸ್ಥಾಪಿಸಲಾಗುತ್ತಿದ್ದು, ಮನೆ ಮನೆಗೆ ತ್ಯಾಜ್ಯ ಸಂಗ್ರಹಸಲು ಕಸದ ಡಬ್ಬಿ ವಿತರಣೆ, ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲು ವಾಹನ ಮತ್ತಿತರ ಕಾರ್ಯಗಳಗಳನ್ನು ಕೈಗೊಳ್ಳಲಾಗಿದೆ. ಆದರೆ, ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ವೈಪಲ್ಯವೋ ಅಥವಾ ಸಿಬ್ಬಂದಿಗಳ ಬೇಜವಬ್ದಾರಿಯೋ ಎಂಬಂತೆ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಇದಕ್ಕೆ ತಾಜ ಉದಾಹರಣೆ ಎಂಬಂತೆ ತ್ಯಾಜ್ಯ ತ್ಯಾಜ್ಯ ಸಂಗ್ರಹಿಸಲು, ವಿಲೇವಾರಿ ಮಾಡಲು ಗ್ರಾಮಪಂಚಾಯಿತಿಯಿಂದ ಖರೀದಿಸಲಾದ ವಾಹನದಲ್ಲಿ ಶನಿವಾರ ಸಂಗ್ರಹ ಮಾಡಲಾದ ತ್ಯಾಜ್ಯವನ್ನು ವಿಲೇವಾರಿ ಮಾಡದೆ ತ್ಯಾಜ್ಯ ಸಹಿತ ವಾಹನವನ್ನು ಗ್ರಾಮಪಂಚಾಯಿತಿ ಆವರಣದಲ್ಲಿ ನಿಲ್ಲಿಸಿದ್ದು, ಲಕ್ಷಾಂತರ ಹಣ ನೀಡಿ ಖರೀದಿ ಮಾಡಲಾದ ವಾಹನವನ್ನು ಸಮರ್ಪಕ ರೀತಿಯಲ್ಲಿ ಬಳಸಲು ಸಹ ಸಿಬ್ಬಂದಿಗಳಿಗೆ ಕಾಳಜಿ ಇಲ್ಲವೆ ಎಂಬ ಪ್ರಶ್ನೆ ಗ್ರಾಮಸ್ಥರದ್ದಾಗಿದೆ.
ಜನರ ತೆರಿಗೆ ಹಣ ಹಾಳು: ತ್ಯಾಜ್ಯ ವಿಲೆವಾರಿ ಮಾಡದೆ ಬೇಜವಬ್ದಾರಿಯಿಂದ ವಾಹನ ನಿಲ್ಲಿಸಿ ರಜೆ ತೆರಳಿರುವ ಸಂಬಂಧಿಸಿದವರಿಂದ ಜನತೆ ಕಟ್ಟಿರುವ ಲಕ್ಷಾಂತರ ಹಣ ವ್ಯರ್ಥವಾಗಲು ಕಾರಣವಾಗಲಿದೆ. ವಾಹನದಲ್ಲಿ ತ್ಯಾಜ್ಯ ಬಿಟ್ಟರೆ ವಾಹನ ಹಾಳಾಗಲಿದೆ ಎನ್ನುವ ಪ್ರಜ್ಞೆ ಇಲ್ಲವಾದರೆ ಹೇಗೆ ಎಂದು ನ್ಯಾಯವಾದಿ ಟಿ.ಕೆ.ಹನುಮಂತರಾಜು ಪ್ರಶ್ನಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

