
ದೊಡ್ಡಬಳ್ಳಾಪುರ: ಜಯಂತಿಗಳು ಕೇವಲ ಪೂಜೆಗೆ ಸೀಮಿತವಾಗದೇ ಶರಣರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಾರ್ಥಕ ಜೀವನ ಸಾಧ್ಯ ಎಂದು ತಹಶಿಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಅಯೋಜಿಸಿದ್ದ ಮಡಿವಾಳ ಮಾಚಿದೇವರ ದೇವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕಾರಗಳು ಜಯಂತಿಗಳ ಆಚರಣೆಯೊಂದಿಗೆ ಶರಣರ ಜೀವನದ ಸಂದೇಶಗಳನ್ನು ಜನರಿಗೆ ತಿಳಿಸುವ ಪ್ರಯತ್ನವಾಗಿದೆ. ಶರಣರು ಕೇವಲ ನುಡಿದವರಲ್ಲ ಅದರ ಬದಲಾಗಿ ನುಡಿದಂತೆ ನಡೆದು ಸಾರ್ಥಕ ಜೀವನವನ್ನು ನಡೆಸಿದ್ದಾರೆ.ಅವರ ಕಾಯಕ ನಿಷ್ಠೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಅವಶ್ಯಕವಾಗುತ್ತದೆ. ಅವರ ಸಂದೇಶದಂತೆ ಮೇಲು ಕೀಳು ಭಾವನೆ ಬಿಟ್ಟು ಎಲ್ಲರೂ ಸಮಾನರು ಎಂದು ಬದುಕಿದಾಗ ಸಮಾಜದ ಏಳಿಗೆ ಸಾಧ್ಯವಾಗುತ್ತದೆ. ಒಗ್ಗಟ್ಟಿನ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವೆಂದರು.
ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಮಾತನಾಡಿ, ರಾಷ್ಟ್ರದ ಆಡಳಿತವು ಅನುಭವ ಮಂಟಪದಂತಿರಬೇಕು. ನಿಜವಾದ ಶುದ್ದಿಯೆಂದರೆ ಬಹಿರಂಗ ಶುದ್ದಿಯಲ್ಲ ಅಂತರಂಗ ಶುದ್ದಿಯೇ ಸರಿಯಾದ ಶುದ್ದಿ ಅಂತರಂಗದ ಕೊಳೆಯನ್ನು ತೊಳೆಯುವವನೇ ಮಡಿವಾಳ. ಒಂದೊಮ್ಮೆ ಬಸವಣ್ಣ ಹೇಳಿದಂತೆ ಬೇಡುವವನ ಕೈಗಳಲ್ಲಿದೇ ಬಡವನಾಗಿದ್ದೇನೆ ಎನ್ನುವ ಮೂಲಕ ದಾನದ ಮಹತ್ವವನ್ನು ತಿಳಿಸಿದ್ದಾರೆ. ಅನುಭವ ಮಂಟಪದಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನಗಳಿದ್ದವು. ಹಿಂದೆ ಜಾತಿ ಎಂಬುದು ಅವರ ಕೆಲಸವನ್ನು ಆಧರಿಸಿತ್ತು ಅದು ಇತ್ತೀಚಿನ ದಿನಗಳಲ್ಲಿ ಚಿತ್ರಣ ಬದಲಾಗುತ್ತಿದೆ.ನಮ್ಮ ಮುಂದಿನ ಪೀಳಿಗಿಗೆ ಶರಣರ ಆದರ್ಶಗಳನ್ನು ಹಾಗೂ ಅದರ ಸ್ವಾರಸ್ಯವನ್ನು ಮಕ್ಕಳಿಗೆ ತಿಳಿ ಹೇಳಬೇಕು. ಮಕ್ಕಳಿಗೆ ಅವರ ಸಾಧನೆ ಪ್ರೋತ್ಸಾಹಿಸಿ ಅವರ ಬೆನ್ನತ್ತಟುವ ಕೆಲಸವಾಗದರೆ ಅವರು ಮತ್ತಷ್ಟು ಸಾಧಿಸಲು ಮುಂದಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಮಹಾನಿಯರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಪ್ರಮೀಳಾ ಮಹಾದೇವ್,ರೇಷ್ಮೇ ಇಲಾಖೆ ಸಹಾಯಕ ನಿರ್ದೇಶಕ ಉದಯ್, ನಗರ ಪೊಲೀಸ್ ಠಾಣೆ ಸಬ್ಇನ್ಸಪೆಕ್ಟರ್ ಸೋಮಶೇಖರ್, ಮಡಿವಾಳ ಸಮುದಾಯದ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

