ಆರೋಗ್ಯದ ಕಾಳಜಿಯಿಂದ ಬೆಲೆ ಏರಿಕೆ ಬಿಸಿ ಅನಿವಾರ್ಯ / ಒಂದು ತಿಂಗಳ ಒಳಗಾಗಿ ಬೆಂ.ಗ್ರಾ.ಜಿಲ್ಲಾ ಕೇಂದ್ರ ಘೋಷಣೆ: ಸಚಿವ ಆರ್.ಅಶೋಕ್

ಬೆಂ.ಗ್ರಾ‌.ಜಿಲ್ಲೆ: ನಾಲ್ಕು ತಾಲೂಕುಗಳ ಜನಾಭಿಪ್ರಾಯ ಸಂಗ್ರಹಿಸಿ ಒಂದು ತಿಂಗಳ ಒಳಗಾಗಿ ಜಿಲ್ಲಾ ಕೇಂದ್ರವನ್ನು ಘೋಷಿಸಲಾಗುವುದೆಂದು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ತಿಳಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದೊಡ್ಡಬಳ್ಳಾಪುರಕ್ಕೆ ಮಂಜೂರಾಗಿರುವ ಜಿಲ್ಲಾ ಆಸ್ಪತ್ರೆಗೆ ವಿಧಾನಸಭೆಯ ಕ್ಯಾಬಿನೆಟ್ ಅನುಮೋದನೆ ದೊರಕದಿರುವ ಕುರಿತು ಮಾದ್ಯಮದವರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂ.ಗ್ರಾ. ಜಿಲ್ಲೆ ಘೋಷಣೆಯಾಗದ ಕಾರಣ ಅನುಮೋದನೆಯಾಗಿಲ್ಲ. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕಿನ ಜನರ ಅಭಿಪ್ರಾಯ ಸಂಗ್ರಹಿಸಿ.ಯಾವುದೇ ಪಕ್ಷಪಾತ ಮಾಡದೆ ತಿಂಗಳ ಒಳಗಾಗಿ ಜಿಲ್ಲಾ ಕೇಂದ್ರ ಘೋಷಣೆ ಮಾಡಿ ಅನುಮೋದನೆ ನೀಡಲಾಗುವುದೆಂದರು.

ಬಿಡುಗಡೆಯಾದ ಹಣ ಬಳಸಿ ನಂತರ ಸರ್ಕಾರ ವಿರುದ್ದ  ಮಾತಾಡಿ: ದೊಡ್ಡಬಳ್ಳಾಪುರದ ಅಭಿವೃದ್ಧಿ ಅನುದಾನ ತಡೆದಿರುವ ಶಾಸಕ ಟಿ.ವೆಂಕಟರಮಣಯ್ಯರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರಾದ ಎಂಟಿಬಿ ನಾಗಾರಾಜ್ ಹಾಗೂ ಅಶೋಕ್, ನಗರೋತ್ಥಾನ ಯೋಜನೆಯಡಿ ಮೊದಲ ಹಂತದ ಕಾಮಗಾರಿ ನಡೆದಿದದ್ದು, ಮುಂದಿನ ಹಂತ ಬಿಡುಗಡೆಯಾಗಲಿದೆ. ಈಗ ಬಿಡುಗಡಯಾಗಿರುವ ಶಾಸಕರ ಅನುದಾನ ಬಳಸದೆ, ಎರಡನೇ ಹಂತದ ಹಣ ಕೇಳುವುದು ಎಷ್ಟು ಸರಿ. ಮೊದಲು ಬಿಡುಗಡೆಯಾದ ಹಣವನ್ನು ಬಳಕೆ ಮಾಡಿ ನಂತರ ಸರ್ಕಾರ ವಿರುದ್ದ ಮಾತನಾಡಲಿ ಎಂದರು.

ಆರೋಗ್ಯದ ಕಾಳಜಿಯಿಂದ ಬೆಲೆ ಏರಿಕೆ: ಪೆಟ್ರೋಲ್ / ಡಿಸೇಲ್ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಏರಿತದ ಕಾರಣ ಪೆಟ್ರೋಲ್ / ಡಿಸೇಲ್ ಬೆಲೆ ಉಂಟಾಗುತ್ತದೆ. ಕರೊನಾದಿಂದ ಉಂಟಾದ ಆರ್ಥಿಕ ಅವ್ಯವಸ್ಥೆ ಸರಿ ದೂಗಿಸಲು ತೆರಿಗೆ ಅನಿರ್ವಾರ್ಯವಾಗಿದೆ, ಆರೋಗ್ಯದ ಹಿತ ದೃಷ್ಟಿಯಿಂದ ಬೆಲೆ ಏರಿಕೆ ಅಗತ್ಯವಾಗಿದ್ದು, ಜನತೆಗೂ ಇದರ ಅರಿವಿದೆ ಆದರೆ ಕಾಂಗ್ರೆಸ್ ರಾಜಕೀಯ ಪ್ರೇರಿತ ಹೋರಾಟ ಮಾಡುತ್ತಿದೆ ಎಂದರು.

ಉದ್ಯೋಗ ಸೃಷ್ಟಿಯ ಬಜೆಟ್, ಕಾಂಗ್ರೆಸ್ ಕುಟುಂಬದ ಬಜೆಟ್ ಅಲ್ಲ: ಕರೊನಾದಿಂದ ಉಂಟಾದ ಆರ್ಥಿಕ ಅಸಮತೋಲನದಿಂದ ಪಾಕಿಸ್ತಾನ ಸೇರಿದಂತೆ ಇತರ ದೇಶಗಳು ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಆದರೆ ಭಾರತ ಕರೊನ ಆರ್ಥಿಕ ಸಂಕಷ್ಟದ ನಡುವೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಬಜೆಟ್ ನೀಡಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸರ್ಕಾರದ ಜನಪರ, ಪಾರದರ್ಶಕ, ಹಗರಣ ರಹಿತ ಆಡಳಿತವನ್ನು ನೀಡುತ್ತಿರುವುದರಿಂದ ಕಳೆದ 6 ವರ್ಷದಿಂದ ವಿರೋಧಿಸಲು ಅವಕಾಶ ಸಿಗದೆ. ರೈತರಿಗೆ ಸುಳ್ಳು ಮಾಹಿತಿ ದಾರಿ ತಪ್ಪಿಸಿ ಹೋರಾಟ ಮಾಡಿಸುವುದು. ಬಜೆಟ್ ಕುರಿತು ಅವಹೇಳನ ಮಾಡುವುದು ಮಾಡುತ್ತಿದ್ದಾರೆ.

ಕೇಂದ್ರದ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ದಾಖಲೆಯ ಸುಮಾರು 2 ಲಕ್ಷ 23 ಸಾವಿರ ಕೋಟಿ ಮೀಸಲಿಟ್ಟಿದೆ. 54 ದೇಶಕ್ಕೆ ಕರೊನಾ ಲಸಿಕೆ ನೀಡಿದ್ದು. ಮತ್ತೆರಡು ಲಸಿಕೆ ಬರುತ್ತಿವೆ. ಆ ಮೂಲಕ ಭಾರತ ಇಡೀ ಪ್ರಪಂಚಕ್ಕೆ ಆರೋಗ್ಯ ಕೇಂದ್ರವಾಗಿದೆ.

ಕರ್ನಾಟಕದಲ್ಲಿ 33 ರಾಷ್ಟ್ರೀಯ ಹೆದ್ದಾರಿಗಳಿಗೆ 10,904  ಕೋಟಿ ಬಿಡುಗಡೆ,  2021-22 ರಲ್ಲಿ 1,16,144 ಕೋಟಿ ರೂ ಮೂಲ ಸೌಕರ್ಯ ನಿರ್ಮಾಣ, 2ನೇ ಹಂತದ ಬೆಂಗಳೂರು ಮೆಟ್ಟ್ರೋ ನಿರ್ಮಾಣಕ್ಕೆ 14,788 ಕೋಟಿ ರೂ ಬಿಡುಗಡೆ, ಬೆಂಗಳೂರು ಉಪನಗರ ಯೋಜನೆ 23 ಸಾವಿರ 93  ಕೋಟಿ ಬಿಡುಗಡೆ,  ರೈಲ್ವೆ ಯೋಜನೆಗಳಿಗೆ 4,870 ಕೋಟಿ ರೂಪಾಯಿ ಅನುದಾನ ಬಿಡುಗಡೆ,  ಉದ್ಯೋಗ ಸೃಷ್ಟಿಗೆ ತುಮಕೂರಿನಲ್ಲಿ 7,725ಕೋಟಿ ವೆಚ್ಚದಲ್ಲಿ ಸಣ್ಣ ಕೇಂದ್ರಗಳ ಕಾರಿಡಾರ್ ಸ್ಥಾಪಿಸಿ 2.8ಲಕ್ಷ ಉದ್ಯೋಗ ಸೃಷ್ಟಿ, ಉತ್ತರ ಕರ್ನಾಟಕ ಭಾಗದಲ್ಲಿ 21 ಸಾವಿರ ಕೋಟಿ ವೆಚ್ಚದ 13 ಹೆದ್ದಾರಿ ನಿರ್ಮಾಣ, ಬೆಂಗಳೂರು ಮಂಗಳೂರು ಸಂಪರ್ಕಿಸುವ ಶಿರಾಡಿಯ 13ಕಿಮಿ ಸುರಂಗ ಮಾರ್ಗ ನಿರ್ಮಾಣಕ್ಕೆ 10  ಕೋಟಿ ಬಿಡುಗಡೆ. ಹಳ್ಳಿಗಳಲ್ಲಿ ಹಕ್ಕುಪತ್ರ ನೀಡುವ ಸ್ವಾಮಿತ್ವ ಯೋಜನೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಣೆ, ಗ್ರಾಮೀಣ ಸೌಕರ್ಯಕ್ಕೆ 40ಸಾವಿರ ಕೋಟಿ. 35 ಸಾವಿರ ಕೋಟಿ ಕರೊನಾ ಲಸಿಕೆ, ಕರ್ನಾಟಕದಲ್ಲಿ 15 ತುರ್ತು ಚಿಕಿತ್ಸೆ, ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಗೆ ಅನುಮೋದನೆ, ಉಜ್ವಲ ಯೋಜನೆಯಡಿ ಒಂದು ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ವಿಸ್ತರಣೆ, ಒನ್ ನೇಷನ್ ಒನ್ ಕಾರ್ಡ್ ಅಡಿ ಪಡಿತರ ಚೀಟಿ, ಕಾಳ ಸಂತೆ ಮಾರಾಟ ಅರ್ಹರಿಗೆ ತಲುಪಿಸಲು  ನಕಲಿ ಪಡಿತರಕ್ಕೆ ಈ ಯೋಜನೆ ಉಪಕಾರಿ, 75 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಪಿಂಚಣಿ ಮತ್ತು ಬಡ್ಡಿ ಆದಾಯಕ್ಕೆ ಸಂಬಂಧಿಸಿ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಮಹತ್ತರವಾದ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ‌ ನೀಡಿರುವುದು ಸ್ವಾಗತಾರ್ಹ ವಿಚಾರವಾಗಿದೆ. 

ಕರೊನಾ ಕಷ್ಟದಲ್ಲಿ ಬಡ ಜನರ, ರೈತರ ಪರ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು, ರಾಜ್ಯ ಬಜೆಟ್ ಗೆ ಪೂರಕ ಬಜೆಟ್ ಆಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿನ ತಿಂಗಳ ಅಧಿವೇಶನದಲ್ಲಿ ಇದೇ ಮಾದರಿಯಲ್ಲಿ ಬಜೆಟ್ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರೇರಣೆಯಲ್ಲಿ ಹಳ್ಳಿಗಳ ಕಡೆ ಜಿಲ್ಲಾಧಿಕಾರಿಗಳ ನಡೆ ಕಾರ್ಯ ಆರಂಭಿಸಲಾಗುತ್ತಿದ್ದು, ಫೆ.20ರಂದು ಶನಿವಾರ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ 24 ಗಂಟೆಗಳ ಕಾಲ ಜಿಲ್ಲಾಧಿಕಾರಿಗಳೊಂದಿಗೆ ವಾಸ್ತವ್ಯ ಹೂಡಿ ಕಂದಾಯ ಇಲಾಖೆ ಸಂಬಂಧಿಸಿದ ಸಮಸ್ಯೆ ಬಗೆ ಹರಿಸಲಾಗುವುದು. ಆ ಮೂಲಕ ಸರ್ಕಾರಿ ಕಚೇರಿಗೆ ಓಡಾಡಲು ಚಪ್ಪಲಿ ಸವೆಸುತ್ತಿದ್ದ ಜನತೆಗೆ ನೆಮ್ಮದಿ ನೀಡಿ, ಅಧಿಕಾರಿಗಳ ಚಪ್ಪಲಿ ಸವೆಯುವಂತೆ ಮಾಡಲಾಗುತ್ತಿದೆ.

ಕೃಷಿ ಕಾಯ್ದೆ ವಿರೋಧ ಕಾಂಗ್ರೆಸ್ ಕೈವಾಡ: ಕಾಂಗ್ರೆಸ್ ಕೈವಾಡದಿಂದ ಕೃಷಿ ಕಾಯ್ದೆ ತಿದ್ದುಪಡಿ ವಿರುದ್ದ ಅಪಪ್ರಚಾರ ಮಾಡಿ, ರೈತರನ್ನು ಎತ್ತಿಕಟ್ಟಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿಸುತ್ತಿದೆ. ಈ ಹೋರಾಟದ ಹಿಂದೆ ಕಾಂಗ್ರೆಸ್ ಅಲ್ಲದೆ ಕಾಣದ ಕೈಗಳು ಸೇರಿಕೊಂಡಿವೆ‌. ತಾನು ಬೆಳೆದ ಬೆಳೆ ತನಗಿಷ್ಟ ಬಂದ ಕಡೆ ಮಾರಾಟ ಮಾಡುವ ಹಕ್ಕು ರೈತನದು, ಅದಕ್ಕೆ ಏಕೆ ಅಡ್ಡಿ. ಈ ಕಾಯ್ದೆಯಿಂದ ರೈತನಿಗೆ ಸ್ವಾತಂತ್ರ್ಯ ಸಿಗಲಿದೆ. ಕಾಯ್ದೆಯಿಂದ ಎಪಿಎಂಸಿಗೆ ಹಾನಿಯಾಗುವುದಿಲ್ಲ, ಎಪಿಎಂಸಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರ ಹೆಸರಿನ ಹೋರಾಟ ಕೇವಲ ಎರಡು ಮೂರು ರಾಜ್ಯಗಳಿಗೆ ಸೀಮಿತವಾಗಿದ್ದು, ಕಾಂಗ್ರೆಸ್ ಪಕ್ಷ ದೇಶಾದ್ಯಂತ ಹರಡುತ್ತಿದೆ. ಅಂಬಾನಿ, ಅದಾನಿ ಮೋದಿ ಸರ್ಕಾರದ ಅವಧಿಯಲ್ಲಿ ಮಾತ್ರ ಉದ್ಭವ ಆದವರಲ್ಲ ಕಾಂಗ್ರೆಸ್ ಅವಧಿಯಲ್ಲಿಯೂ ಇದ್ದವರು, ಈಗಲೂ ಇದ್ದಾರೆ ಮುಂದೆಯೂ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಕಾರ್ಯಕಾರಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಗೋವಿಂದರಾಜು,  ವಕ್ತಾರರಾದ ಪುಷ್ಪಾಶಿವಶಂಕರ್ ಮತ್ತಿತರರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

ರಾಜಕೀಯ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಯುದ್ಧ ಇನ್ನೂ ಸ್ಥಗಿತಗೊಂಡಿಲ್ಲ. ಅಡುಗೆ ಅನಿಲ ಸೇರಿದಂತೆ ತೈಲ ಸಮಸ್ಯೆ ಎಲ್ಲ ದೇಶಗಳಿಗೆ ತಟ್ಟಿದೆ. ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಆರ್‌. ಅಶೋಕ (R. Ashoka)

[ccc_my_favorite_select_button post_id="121608"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]