ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಸಮುದಾಯ ಭವನದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ, ಕೃಷಿ ಇಲಾಖೆವತಿಯಿಂದ ಮುಖ್ಯಮಂತ್ರಿಗಳ ವಿದ್ಯಾನಿಧಿ ಹಾಗೂ ಬೆಳೆ ಸಮೀಕ್ಷೆ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಮಾತನಾಡಿದ ತೂಬಗೆರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿ.ಎಂ.ನವೀನ್ ಕುಮಾರ್, ಪ್ರಸ್ತುತ ಕೃಷಿಯಲ್ಲಿ ಸಾಪ್ರದಾಯಿಕ ಮತ್ತು ವೈಜ್ಞಾನಿಕ ತಾಂತ್ರಿಕತೆಗಳ ಬಗ್ಗೆ ರೈತರು ತಮ್ಮ ಮಕ್ಕಳಿಗೆ ತಿಳಿವಳಿಕೆ ನೀಡದೆ ಕೃಷಿಯೇತರ ಚಟುವಟಿಕೆಗಳ ಬಗ್ಗೆ ಮನವಲಿಸುತ್ತಿದ್ದಾರೆ ಇದು. ಮುಂದಿನ ಪೀಳಿಗೆಗೆ ನಮ್ಮ ಕೃಷಿ ಸಂಸ್ಕೃತಿ ಮತ್ತು ತಾಂತ್ರಿಕತೆಗಳು ವರ್ಗಾವಣೆಯಾಗದಿದ್ದಲ್ಲಿ, ಕೃಷಿಯಲ್ಲಿ ಅನ್ಯರನ್ನು ಅವಲಂಬಿಸ ಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ.
ಈ ನಿಟ್ಟಿಯಲ್ಲಿ ಕಾಲೇಜು ಹಂತದಲ್ಲಿ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ತರಭೇತಿ ಶಿಬಿರಗಳನ್ನು ಮಾಡುವುದು ಅವಶ್ಯಕವಿದೆ ಎಂದರು.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಶಿಷ್ಯಾವೇತನ ಯೋಜನೆಯಡಿ ರೈತ ಕುಟುಂಬದ ಪದವಿ ಪೂರ್ವ ಮತ್ತು ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಯಾವುದೇ ವಿದ್ಯಾರ್ಥಿ ವೇತನ ಪಡೆದರೂ ರೈತ ವಿದ್ಯಾನಿಧಿ ಪಡೆಯಲು ಅರ್ಹರಿದ್ದು, ಅರ್ಜಿ ಸಲ್ಲಿಸಿದೆ ಇರುವ ವಿದ್ಯಾರ್ಥಿಗಳು ಕೂಡಲೇ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೋಳ್ಳಬೇಕೆಂದದರು.
ಇದೇ ವೇಳೆ ರೈತರೇ ಸ್ವತಃ ಬೆಳೆ ಸಮೀಕ್ಷೆ ಮಾಡಿಸಿ ಮುಂದೆ ಬೆಳೆ ಪರಿಹಾರ, ಬೆಳೆ ಸಾಲ ಸೌಲಭ್ಯ, ಬೆಂಬಲ ಬೆಲೆಯ ಸೌಲಭ್ಯ ಹಾಗೂ ಬೆಳೆ ವಿಮೆ ಸೌಲಭ್ಯ ಪಡೆಯಬಹುದು. ಈಗ ರೈತರು ಬೆಳೆ ಸಮೀಕ್ಷೆ ಆಪ್ ಮೂಲಕ ತಮ್ಮ ಜಮೀನಿನ ಸರ್ವೆ ನಂಬರ್, ಹಿಸ್ಸಾ ವಾರು ಬೆಳೆದ ಬೆಳೆ ವಿವರಗಳನ್ನು ಫೋಟೋ ಸಹಿತ ಆಪ್ಲೋಡ್ ಮಾಡುವ ವಿಧಾನವನ್ನು ಕೃಷಿ ಅಧಿಕಾರಿ ನವೀನ್ ಕುಮಾರ್ ವಿದ್ಯಾರ್ಥಿಗಳಿಗೆ ವಿವರಿಸಿದರು.
ಗ್ರಾಮ ಪಂಚಾಯಿತಿ ಅದ್ಯಕ್ಷ ಸುರೇಶ್ ಬಾಬು ಮಾತನಾಡಿ, ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಮತ್ತು ರೈತ ವಿದ್ಯಾನಿಧಿ ಯೋಜನೆಯ ಕುರಿತು ಶಿಬಿರ ಆಯೋಜಿಸಿ ಮಾಹಿತಿ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕೃಷಿ ಇಲಾಖೆ ಯೋಜನೆಗಳು ಮತ್ತು ಬೆಳೆ ಸಮೀಕ್ಷೆಯ ಬಗ್ಗೆ ರೈತರ ಮಕ್ಕಳಿಗೆ ತರಬೇತಿ ನೀಡುವುದರಿಂದ ರೈತರಿಗೆ ಉಪಕಾರಿಯಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ತೂಬಗೆರೆ ಗ್ರಾಮ ಪಂಚಾಯಿತಿ ಪಿಡಿಒ ವೆಂಕಟೇಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿವಶಂಕರ್, ಕ್ರಿಯಾಜೆನ್ ಸಂಸ್ಥೆಯ ಸಂಶೋಧಕ ವಿನಾಯಕ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….