ರಾಷ್ಟ್ರೀಯ ಬ್ಯಾಂಕ್ ಗಳ ಪಾಲಿಗೆ ಪತ್ರಕರ್ತರು ಹೊರಗಿವರು: ಕೆ.ವಿ.ಪ್ರಭಾಕರ್

Journalists are outsiders for nationalized banks: K.V. Prabhakar

ಬೆಂಗಳೂರು: 2016 ರಲ್ಲಿ ನೋಟು ನಿಷೇಧ ಜಾರಿ ಆದಾಗ ದೇಶದ ನಗರ ಆರ್ಥಿಕತೆ ಪಾತಾಳ ಸೇರಿತು. ಆದರೆ, ಗ್ರಾಮೀಣ ಭಾರತದ ಆರ್ಥಿಕತೆ ಕುಸಿಯದಂತೆ ತಡೆದದ್ದು ಸಹಕಾರಿ ತತ್ವ ಮತ್ತು ಸಹಕಾರಿ ಚಳವಳಿಯ ಮೌಲ್ಯ ಎನ್ನುವುದನ್ನು ನಾವು ಮರೆಯಬಾರದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (K.V. Prabhakar) ಅಭಿಪ್ರಾಯಪಟ್ಟರು.

ಪತ್ರಕರ್ತರ ಸಹಕಾರಿ ಸಂಘಕ್ಕೆ 75 ವರ್ಷಗಳು ತುಂಬಿದ ಸಂದರ್ಭದಲ್ಲಿ ಆಯೋಜಿಸಿದ್ದ “ಅಮೃತ ಸಂಭ್ರಮ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯ ಚಳವಳಿಕ ಜೊತೆ ಜೊತೆಗೇ ನಡೆದದ್ದು ನಮ್ಮ ದೇಶದ ಸಹಕಾರ ಚಳವಳಿ. ಮಹಾತ್ಮಗಾಂಧಿ ದೇಶದ ಸ್ವಾತಂತ್ರ್ಯಕ್ಕಾಗಿ 1920 ರಲ್ಲಿ “ಅಸಹಾಕಾರ ಚಳವಳಿಗೆ” ಕರೆ ಕೊಡುವ ಮೊದಲೇ ರಾಜ್ಯದಲ್ಲಿ 1904 ರಲ್ಲಿ ಸಹಕಾರ ಕಾಯ್ದೆ ಜಾರಿ ಆಗಿತ್ತು. ದುಡಿಯುವ ವರ್ಗಗಳ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಡೆದ ಸಹಕಾರ ಚಳವಳಿಯ ಭಾಗವಾಗಿ “ಪತ್ರಕರ್ತರ ಸಹಕಾರ ಸಂಘವೂ ಜನ್ಮ ತಾಳಿದೆ”. ಈ ಸಂಘದ ಸ್ಥಾಪನೆಗೆ ಮುನ್ನುಡಿ ಬರೆದ ಎಲ್ಲಾ ಹಿರಿಯರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು.

ಸಹಕಾರಿ ಸಂಘಗಳು, ಸ್ವ-ಸಹಾಯ ಸಂಘಗಳ ಚಳವಳಿಗಳು ಇಂದಿರಾಗಾಂಧಿಯವರ ಬ್ಯಾಂಕ್ ಗಳ ರಾಷ್ಟ್ರೀಕರಣಕ್ಕೆ ಪ್ರೇರಣೆ ಆಗಿದ್ದವು.

“ಪರಸ್ಪರ” ಎನ್ನುವುದು ಸಹಕಾರ ತತ್ವದ ಮೂಲ ಮೌಲ್ಯ ಆಗಿರುವಂತೆಯೇ ಪತ್ರಿಕೋದ್ಯಮದ ಮೂಲ ಮಂತ್ರವೂ ಇದೇ ಆಗಿದೆ. ಪತ್ರಕರ್ತರು ಸಹಕಾರ ಸಂಘ ಸ್ಥಾಪಿಸುವ ಮೊದಲೇ ಕೃಷಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನುಗಾರರ ಸಹಕಾರ ಸಂಘಗಳು ಸ್ಥಾಪನೆ ಆಗಿದ್ದವು. ದುಡಿಯುವ ವರ್ಗಗಳನ್ನು, ಶ್ರಮಿಕ ಸಮುದಾಯಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಸಹಕಾರಿ ಮನೋಭಾವದಿಂದಲೇ ಪತ್ರಕರ್ತರ ಸಹಕಾರ ಸಂಘವನ್ನೂ ನಮ್ಮ ಹಿರಿಯರು ಸ್ಥಾಪಿಸಿದರು.

ಪತ್ರಕರ್ತರು ಮತ್ತು ಪತ್ರಿಕಾ ಕಾರ್ಮಿಕರು ರಾಷ್ಟ್ರೀಯ ಬ್ಯಾಂಕ್ ಗಳ‌ ಪಾಲಿಗೆ ಹೊರಗಿನವರು. ನಾನೂ ಸಹ ಗೃಹ ಸಾಲ ಪಡೆಯುವಾಗ ಸಿಕ್ಕಾಪಟ್ಟೆ ರಗಳೆ ಅನುಭವಿಸಿದೆ.

ಪತ್ರಕರ್ತರಿಗೆ ಖಾಸಗಿಯಾಗಿ ಸಾಲ ಕೊಡುವವರೂ ಇಲ್ಲ. ವಾಪಾಸ್ ಕೇಳೋದು ಕಷ್ಟ ಎನ್ನುವ ಭಯ ಖಾಸಗಿಯವರಿಗೆ ಇದ್ದೇ ಇದೆ. ಹೀಗಾಗಿ ಈ ಸಂಘದಲ್ಲಿ ನಾವೇ ಪರಸ್ಪರ ಒಬ್ಬರಿಗೊಬ್ಬರು ಜಾಮೀನು ಆಗುವ ಮೂಲಕ ಪರಸ್ಪರರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದೇವೆ. ಕಷ್ಟದಲ್ಲಿದ್ದಾಗ ಜಾಮೀನು ಹಾಕಿಸಿಕೊಂಡವರು, ಜಾಮೀನು ಹಾಕಿದವರಿಗೆ ವಂಚಿಸಬಾರದು ಎಂದು ನನ್ನ ವಿನಂತಿ. “ಪರಸ್ಪರತೆ” ಮೌಲ್ಯ ಕಾಪಾಡದಿದ್ದರೆ ಸಹಕಾರ ಬ್ಯಾಂಕ್ ಗಳು ಯಶಸ್ವಿಯಾಗುವುದು ಕಷ್ಟ.

ನಿವೇಶನ ಖರೀದಿ ಮತ್ತು ಗೃಹ ನಿರ್ಮಾಣಕ್ಕೆ ನೆರವಾಗುವ ಉದ್ದೇಶದಿಂದ 1949ರಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಕೇವಲ ರೂ. 353.12 ದುಡಿಯುವ ಬಂಡವಾಳ ದೊಂದಿಗೆ ಆರಂಭವಾಗಿ ಈಗ ರೂ. 10ಕೋಟಿಗೂ ಮೀರಿದ ದುಡಿಯುವ ಬಂಡವಾಳ ಹೊಂದಿ, ನಿರಂತರ ನಿವ್ವಳ ಲಾಭವನ್ನೂ
ಗಳಿಸುತ್ತಿರುವುದು ಸಂತೋಷದ ವಿಷಯ.

ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ‘ಎ’ ಶ್ರೇಣಿಯನ್ನು ಪಡೆದು ಮುನ್ನಡೆಯುತ್ತಿರುವುದು ಸಂಘದ ವಹಿವಾಟು ಪಾರದರ್ಶಕವಾಗಿರುವುದು, ಸಂಘ ಒಂದು  ಕುಟುಂಬದಂತೆ
ಪತ್ರಕರ್ತರ ನೋವು ನಲಿವುಗಳಿಗೆ ಸ್ಪಂದಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿ.

ಪ್ರತಿ ವರ್ಷ ಸದಸ್ಯರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು, ಕೊಡಗು ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿರುವುದು ಸಂಘದ ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿ.

ಪ್ರಸಕ್ತ ಆಡಳಿತ ಮಂಡಳಿ ಸೆಪ್ಟೆಂಬರ್ 2023ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಸಂಘದ ಚಟುವಟಿಕೆಗಳನ್ನು ವಿಸ್ತರಿಸಲು ಅವಿರತ ಶ್ರಮವಹಿಸುತ್ತಿರುವುದು ಶ್ಲಾಘನೀಯ.

ಸದಸ್ಯರಿಗೆ ಮನೆ ಮತ್ತು ನಿವೇಶನ ಖರೀದಿಗಾಗಿ ರೂ. 30 ಲಕ್ಷದವರೆಗೆ ಭದ್ರತಾ ಸಾಲ ಸೌಲಭ್ಯ ನೀಡಲು ನಿರ್ಧರಿಸಿರುವುದು ಸಂಘವು ಸುಭದ್ರವಾಗಿರುವುದರ ಸೂಚಕವಾಗಿದೆ.

ಕಡಿಮೆ ಬಡ್ಡಿ ದರದಲ್ಲಿ ರೂ.3 ಲಕ್ಷಗಳ ವರೆಗೆ ವೈಯಕ್ತಿಕ ಸಾಲ, ರೂ.25 ಸಾವಿರದ ವರೆಗೆ ವೈದ್ಯಕೀಯ ನೆರವು ಹಾಗೂ 2 ಲಕ್ಷ ಮೌಲ್ಯದ ಅಪಘಾತ ವಿಮಾ ರಕ್ಷಣೆ ಒದಗಿಸುತ್ತಿದೆ.

ಸಂಘವು ‘ಎ’ ಶ್ರೇಣಿಯ ಆಡಿಟ್‌ ವರ್ಗೀಕರಣ ಹೊಂದಿದ್ದು, 2005 ರಲ್ಲಿ ನಡೆದ ‘ಸಹಕಾರ ಸಪ್ತಾಹ’ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರ ಸಂಘ ವೆಂಬ ಗೌರವಕ್ಕೆ ಪಾತ್ರವಾಗಿರುವುದು ಸಂಘದ ಸದಸ್ಯರ ಸಮರ್ಪಣಾ ಮನೋಭಾವಕ್ಕೆ ಸಾಕ್ಷಿಯಾಗಿದೆ

ಇದು ಹೀಗೆಯೇ ಸಾಗಲಿ, ಸಂಘ ಹಾಗೂ ಪತ್ರಕರ್ತ ಮಿತ್ರರ ಬಾಂಧವ್ಯ ಗಟ್ಟಿಯಾಗಲಿ , ಇನ್ನಷ್ಟು, ಮತ್ತಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಸಂಘ ಹಮ್ಮಿಕೊಂಡು‌ ಮುನ್ನಡೆಯಲಿ ಎಂದು ಹಾರೈಸುತ್ತೇನೆ.

ಸಹಕಾರ ಸಂಘ ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಕಾರಾತ್ಮಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಸಂಘದ ಅಧ್ಯಕ್ಷರಾದ ರಮೇಶ್ ಪಾಳ್ಯ, ಕಾರ್ಯದರ್ಶಿ ರಮೇಶ್, ಹಿರೇಜಂಬೂರು ಸೇರಿ ಎಲ್ಲಾ ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.

ರಾಜಕೀಯ

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ ಬಿ.ಮುನೇಗೌಡ ಬೆಂಬಲಿಗರ ಸಭೆ..!

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ

ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ (JDS) ಪಕ್ಷದಲ್ಲಿ ಆಕ್ರೋಶ ಸ್ಪೋಟವಾಗಿದ್ದು, ಬಿ.ಮುನೇಗೌಡ (B.Mine Gowda, ಹುಸ್ಕೂರು ಆನಂದ್ (Huskur Anand), ಬೆಂಬಲಿಗರು ಇಂದು ಸಾಸಲು ಹೋಬಳಿ ಹೊಸಹಳ್ಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸಭೆ ಸೇರಿ,

[ccc_my_favorite_select_button post_id="121521"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ ಭೀತಿ.!| Video ನೋಡಿ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ

ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಪಂದ್ಯದ ವೇಳೆ ನಿಷೇಧಿತ 'ಇ-ಸಿಗರೇಟ್' (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

[ccc_my_favorite_select_button post_id="121495"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]