ಚಿಕ್ಕಬಳ್ಳಾಪುರ: KIADB ಭೂ ಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ, ಜಿಲ್ಲಾಡಳಿತ ಭವನಕ್ಕೆ ರಾಸುಗಳನ್ನು ನುಗ್ಗಿಸಲು ರೈತರು ಮುಂದಾದ ಸಂದರ್ಭದಲ್ಲಿ ಭಾರಿ ಗಲಾಟೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ನಡೆಯುತ್ತಿದ್ದ ಪ್ರತಿಭಟನೆ ವೇಳೆ ರೈತರ ಕೊರಳಿ ಪಟ್ಟಿಗೆ ಕೈ ಹಾಕಿ ಪೊಲೀಸ್ ದೌರ್ಜನ್ಯ ನಡೆಸಿದ್ದರೆಂದು ಆರೋಪಿಸಿ ರೈತರು ಹಾಗೂ ಪೊಲೀಸರ ನಡುವೆ ಭಾರೀ ತಳ್ಳಾಟ ನೂಕಾಟ ನಡೆದಿದೆ..
ಜೋರು ಗಲಾಟೆ
ಕೈಗಾರಿಕೆಗಳಿಗಾಗಿ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಭೂಮಿ ಸ್ವಾಧೀನ ವಿರೋಧಿಸಿ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ರೈತ ಸಂಘ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ 45 ದಿನ ತಲುಪಿದೆ.
ಬುಧವಾರ ಜಿಲ್ಲಾಡಳಿತ ಭವನಕ್ಕೆ ರಾಸುಗಳನ್ನು ನುಗ್ಗಿಸಲು ರೈತರು ಮುಂದಾದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ, ಜಟಾಪಟಿ ನಡೆಯಿತು.
ರೈತ ಭರತ್ ಎನ್ನುವವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅವರನ್ನು ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿದೆ. ಈ ವೇಳೆ ಬ್ಯಾರಿಕೇಡ್ ಕಿತ್ತು ಎಸೆದು ಜಿಲ್ಲಾಡಳಿತ ಭವನ ಪ್ರವೇಶಿಸಲು ರೈತರು ಮುಂದಾದರು.
ಈ ಸಂದರ್ಭದಲ್ಲಿ ರೈತರು-ಪೊಲೀಸರ ನಡುವೆ ತಳ್ಳಾಟ, ನೂಕಟ ನಡೆದು ಜೋರು ಗಲಾಟೆ ನಡೆಯಿತು.

