ಹರಿತಲೇಖನಿ ದಿನಕ್ಕೊಂದು ಕಥೆ: ಕಂಬಳಿಹುಳಗಳ ಪ್ರಯಾಣ

ಜೀನ್ ಹೆನ್ರಿ ಫಾಬ್ರೆ ಫ್ರಾನ್ಸ್‌ ದೇಶದ ಬಹುದೊಡ್ಡ ಪರಿಸರವಾದಿ. ಆತ ಅನೇಕ ಪ್ರಯೋಗಗಳ ಮೂಲಕ ಪಶು, ಪಕ್ಷಿಗಳ ಜೀವನ ಚಕ್ರಗಳ ಬಗ್ಗೆ ಸಿದ್ಧಾಂತಗಳನ್ನು ಮಂಡಿಸಿದ್ದಾನೆ.

ಅವನ ಒಂದು ಪ್ರಯೋಗ ನನ್ನ ಮನಸ್ಸನ್ನು ಸೆಳೆ­ದಿದೆ. ಫಾಬ್ರೆ ಒಂದೆರಡು ವರ್ಷ ಕಂಬಳಿ­ಹುಳಗಳ ಬಗ್ಗೆ ಸಂಶೋಧನೆ ಮಾಡಿದ. ಅವನೊಂದು ವಿಶೇಷವನ್ನು ಗಮನಿಸಿದ. ಅದೆಂದರೆ ಒಂದೆರಡು ಹುಳು ಸತ್ತರೆ ಪಟಪಟನೇ ನೂರಾರು ಹುಳಗಳು ಸತ್ತು ಹೋಗುತ್ತವೆ. ಹಾಗಾದರೆ ಅವುಗಳಿಗೆ ಸಾಂಕ್ರಾಮಿಕ ರೋಗವೇನಾದರೂ ಬಂದಿರಬಹುದೇ ಎಂದು ಪರೀಕ್ಷಿಸಿದ. ಹಾಗೆ ಇರಲಿಲ್ಲ. ಸತ್ತ ಬಹಳಷ್ಟು ಹುಳಗಳಿಗೆ ರೋಗ ಬಂದಿರಲಿಲ್ಲ. ಅವುಗಳ ಇನ್ನೊಂದು ಲಕ್ಷಣವನ್ನು ಆತ ನೋಡಿದ.

ಒಂದು ಹುಳು ಮುಂದೆ ಹೊರಟರೆ ಅದರ ಹಿಂಭಾ­ಗಕ್ಕೆ ಹೊಂದಿಕೊಂಡೇ ಮತ್ತೊಂದು ಹುಳು ಹೊರಡುತ್ತದೆ. ಅದರ ಹಿಂದೆ ಮತ್ತೊಂದು. ಹೀಗೆ ಹುಳುಗಳ ಒಂದು ಸರಪಳಿಯೇ ಆಗಿ ಹೋಗುತ್ತದೆ. ಒಂದು ರೀತಿ­­ಯಲ್ಲಿ ಅವು ಒಂದಕ್ಕೊಂದು ಅಂಟಿಕೊಂಡೇ ನಡೆಯುತ್ತವೆ.

ಒಂದು ಸಲ ಫಾಬ್ರೆ, ಅಗಲವಾದ ಅಂಚುಳ್ಳ ಮಣ್ಣಿನ ಬಟ್ಟಲೊಂದನ್ನು ತೆಗೆದು­ಕೊಂಡ. ಬಟ್ಟಲಿನ ಮಧ್ಯದಲ್ಲಿ ಸಾಕಷ್ಟು ಸಕ್ಕರೆ ಮತ್ತು ಹುಳುವಿನ ಆಹಾರ ಹಾಕಿದ. ನಂತರ ಹತ್ತಾರು ಹುಳಗಳನ್ನು ಕೂಡಿಹಾಕಿ ಅವುಗಳನ್ನು ಬಟ್ಟಲಿನ ಅಂಚಿನ ಮೇಲಿಟ್ಟ. ಅವುಗಳನ್ನು ಒಂದರ ಹಿಂದೆ ಒಂದರಂತೆ ಇಡುತ್ತ ಬಂದ.

ಇದೇ ಸರ­ಪಳಿ­ಯನ್ನು ಬೆಳೆಸುತ್ತ ಕೊನೆಯ ಹುಳು ಮೊದಲನೆಯದರ ಮುಂದೆಯೇ ಇರು­ವಂತೆ ನೋಡಿಕೊಂಡ. ಅಂದರೆ ಹುಳಗಳ ಚಕ್ರ ಬಟ್ಟಲಿನ ಅಂಚಿನ ಮೇಲೆ ಪೂರ್ತಿ­ಯಾ­ಗಿತ್ತು. ಮೊದಲನೆಯ ಹುಳು ಯಾವುದು, ಕೊನೆಯದಾವುದು ಹೇಳು­ವುದು ಸಾಧ್ಯವಿರಲಿಲ್ಲ.

ಹುಳಗಳು ನಡೆಯುತ್ತಲೇ ಇದ್ದವು. ಈ ಕಂಬಳಿ ಹುಳಗಳು ಕಣ್ಣುಗಳನ್ನು ಪೂರ್ತಿಯಾಗಿ ತೆರೆಯುವುದಿಲ್ಲ. ಅರೆತೆರೆದ ಕಣ್ಣು­ಗಳಿಂದ ಮುಂದಿನ ಹುಳದ ಹಿಂಭಾಗ­ವನ್ನೇ ನೋಡುತ್ತ ಮುಂದಿನ ಹುಳ ಹೇಗೆ ಹೋಗು­ತ್ತದೋ ಹಾಗೆಯೇ ಹಿಂದಿನ­ದೂ ಅನುಸರಿಸುತ್ತ ಹೋಗುತ್ತದೆ.

ಮಣ್ಣಿನ ಬಟ್ಟಲಿನ ಅಂಚಿನಲ್ಲಿದ್ದ ಹುಳುಗಳು ನಡೆಯುತ್ತಲೇ ಹೋದವು. ಎಲ್ಲಿಯೂ ನಿಲ್ಲದೇ ಸತತವಾಗಿ ಏಳು ದಿನ ನಡೆದವು. ಕೊನೆಗೆ ಅವುಗಳ ನಡೆ ನಿಂತಿತು. ಒಂದು ಹುಳ ಠಪ್ಪನೇ ಉದುರಿ ಕೆಳಗೆ ಬಿದ್ದಿತು. ಅದು ಸತ್ತೇ ಹೋಗಿತ್ತು. ಮುಂದೆ ಹತ್ತು ನಿಮಿಷಗಳಲ್ಲಿ ಒಂದರ ಹಿಂದೆ ಒಂದರಂತೆ ಎಲ್ಲ ಹುಳಗಳೂ ಸತ್ತು ಹೋದವು. ಅವೆಲ್ಲ ಸತ್ತದ್ದು ಹೊಟ್ಟೆಗೆ ಆಹಾರವಿಲ್ಲದೇ, ನಿಶ್ಯಕ್ತಿಯಿಂದ, ಆಯಾ­ಸದಿಂದ. ಅತ್ಯಂತ ವಿಚಿತ್ರವೆಂದರೆ ಅವುಗಳಿಗೆ ಅತ್ಯಂತ ಪ್ರಿಯವಾದ ಆಹಾರ ಪಕ್ಕದಲ್ಲೇ ಇತ್ತು.

ಒಂದಾದರೂ ಹುಳ ತನ್ನ ಚಲನೆಯನ್ನು ನಿಲ್ಲಿಸಿ ಮಧ್ಯಕ್ಕೆ ಸಾಗಿ ಆಹಾರವನ್ನು ತಿಂದಿದ್ದರೆ ಬಹುಶಃ ಉಳಿದವುಗಳೂ ಅದನ್ನೇ ಹಿಂಬಾಲಿಸು­ತ್ತಿದ್ದವೇನೋ. ಆದರೆ, ಪ್ರತಿಯೊಂದು ಹುಳವೂ ತನ್ನ ಕಣ್ಣನ್ನು ತೆರೆದುಕೊಳ್ಳದೇ, ಆ ಕಡೆಗೆ ಈ ಕಡೆಗೆ ನೋಡದೇ, ಬರೀ ಮುಂದಿನ ಹುಳವನ್ನೇ ನೋಡುತ್ತ ಚಕ್ರಾಕಾರವಾಗಿ ಸುತ್ತಿ, ಸುಸ್ತಾಗಿ ಸತ್ತಿತ್ತು. ಅವಕ್ಕೆ ನೋಡುವ ಶಕ್ತಿ ಇರಲಿಲ್ಲ­ವೆಂದಲ್ಲ, ಆದರೆ ನೋಡುವ ಮನಸ್ಸಿರಲಿಲ್ಲ. ಅವುಗಳಲ್ಲಿ ಒಂದಾ­ದರೂ ಹುಳ ನಿರ್ಧಾರಿತವಾದ ನಡಾವಳಿಯನ್ನು ತೊರೆದು ವಿಭಿನ್ನವಾಗಿ ಚಿಂತಿಸುವ ಧೈರ್ಯ ಮಾಡಲಿಲ್ಲ. ಮಾಡಿದ್ದರೆ ಅದು ತನ್ನ ಪ್ರಾಣವನ್ನು ಮಾತ್ರವಲ್ಲ, ಉಳಿದ ಹುಳಗಳ ಪ್ರಾಣ­ವನ್ನು ಉಳಿಸಬಹುದಿತ್ತು. 

ನಮ್ಮಲ್ಲಿ ಅನೇಕರ ಬದುಕುಗಳೂ ಹಾಗೆಯೇ ನಡೆದುಹೋಗುತ್ತಿವೆ. ಸಂಪ್ರದಾ­ಯಗಳ ನಿಜವಾದ ಅರ್ಥವನ್ನು ತಿಳಿಯದೆ ಅರೆ­ಗಣ್ಣು ತೆರೆದುಕೊಂಡು ಉಳಿದವರು ಮಾಡಿದಂತೆಯೇ ಮಾಡುತ್ತ ಸುತ್ತಿ, ಸುತ್ತಿ ಆಯಸ್ಸು ಕಳೆದುಕೊಳ್ಳುತ್ತೇವೆ. ನಮ್ಮ ಮನಸ್ಸು­ಗಳೂ ಪ್ಯಾರಾಶೂಟ್ ಇದ್ದ ಹಾಗೆ. ಅವುಗಳು ತೆರೆದುಕೊಂಡಾಗಲೇ ನಮ್ಮನ್ನು ರಕ್ಷಿಸುತ್ತವೆ. ಹೊಸ ಚಿಂತನೆ­ಗಳೆಡೆಗೆ, ಹೊಸ ದಿಕ್ಕುಗಳೆಡೆಗೆ ಮನಸ್ಸು ತೆರೆದುಕೊಂಡಾಗ ಆವಿಷ್ಕಾರ­ಗಳು ಸಿದ್ಧಿಸುತ್ತವೆ, ಅವುಗಳಿಂದ ಪ್ರಪಂಚಕ್ಕೆ ಒಳಿತಾಗುತ್ತದೆ. ಕಂಬಳಿ­ಹುಳುಗಳ ಹಾಗೆ ಸುತ್ತಿದ್ದು  ಸಾಕು.     

ಕೃಪೆ: ಮುಖ ಪುಟ, ಸಂಗ್ರಹ ವರದಿ: ನರಸಿಂಹಮೂರ್ತಿ ಬರಗೂರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!