ಕುದಿಯುವ ಪಾಯಸದ ಪಾತ್ರೆಗೆ ಕೈ ಹಾಕಿ, ಆರಾಧ್ಯ ದೇವಿಗೆ ಪಾಯಸದ ನೈವೇದ್ಯ ಅರ್ಪಿಸುವ ವಾಡಿಕೆ ಇರುವುದು ಶ್ರೀಕ್ಷೇತ್ರ ‘ಹುಲಿಗಿ’ಯಲ್ಲಿದೆ.
ಕೊಪ್ಪಳ ಜಿಲ್ಲೆಯ ಹುಲಿಗಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಹುಲಿಗೆಮ್ಮ ದೇವಿಗೆ, ಭರತ ಹುಣ್ಣಿಮೆಯ 9 ದಿನಗಳ ನಂತರ ನಡೆಯುವ ಜಾತ್ರೆಯಲ್ಲಿ ದೇವಿಯ ಭಕ್ತರು ಈ ಪವಾಡ ಮೆರೆಯುತ್ತಾರೆ.
ಈ ದೇವಿಗೆ ಸವದತ್ತಿ ಎಲ್ಲಮ್ಮ ಸ್ವರೂಪಿಣಿ ಎಂದೂ ಕರೆಯುತ್ತಾರೆ. ಹುಲಿಗೆಮ್ಮನ ತಾಯಿ ಮುದ್ದಮ್ಮ ದೇವಿ, ಹುಲಿಗೆಮ್ಮನ ಸೋದರಿ ಹೊಸೂರಮ್ಮ ದೇವಿ, ಹುಲಿಗೆಮ್ಮನ ದೇಗುಲ ಸಮೀಪದಲ್ಲೇ ಸೋಮೇಶ್ವರ ದೇವಾಲಯವಿದೆ.
ಬೇಡಿ ಬರುವ ಭಕ್ತರ ನೋವು, ಕಷ್ಟ, ನಷ್ಟಗಳನ್ನು ನಿವಾರಿಸಿ, ಇಷ್ಟಾರ್ಥಗಳನ್ನು ಸಿದ್ಧಿಸುವ ಹುಲಿಗೆಮ್ಮ ದೇವಿಯ ದೇವಾಲಯ ಕೊಪ್ಪಳ ಜಿಲ್ಲೆಯಿಂದ 22ಕಿಮೀ ದೂರದಲ್ಲಿದೆ.
ಕೃಪೆ: ಪ್ರಶಾಂತ್ ಕೆ. ಶಿಂಗೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….