ಬೆಂ.ಗ್ರಾ.ಜಿಲ್ಲೆ: ತೋಟಗಾರಿಕೆ ಇಲಾಖೆ ವತಿಯಿಂದ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಂರಕ್ಷಿತ ಬೇಸಾಯದಡಿಯಲ್ಲಿ ಪಾಲಿಥೀನ್ ಶೀಟ್ ಹಾಗೂ ಗಿಡಗಳ ಬದಲಾವಣೆಗೆ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಸಿರುಮನೆಯಲ್ಲಿ ಗುಲಾಬಿ, ಕಾರ್ನೇಷಿಯಾ, ಜರ್ಬೆರಾ, ಸೇವಂತಿಗೆ, ಆರ್ಕಿಡ್ಸ್, ಆಂಥೋರಿಯಂ ಮುಂತಾದ ಪುಷ್ಪಗಳನ್ನು ಹಾಗೂ ಟೊಮ್ಯಾಟೋ, ಕ್ಯಾಪ್ಸಿಕಂ, ಬದನೆ, ಸೌತೆಕಾಯಿ (Cucumber) ತರಕಾರಿಗಳನ್ನು ಬೆಳೆಸಿ ಸ್ಥಳೀಯ ಮಾರುಕಟ್ಟೆ, ದೇಶ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೆಚ್ಚು ರೈತರು ಆಸಕ್ತಿಯನ್ನು ತೋರಿಸಿರುತ್ತಾರೆ. ಪ್ರಾರಂಭದಲ್ಲಿ ಇಂತಹ ಉನ್ನತ ತಂತ್ರಜ್ಞಾನದ ಪುಷ್ಪ ಹಾಗೂ ತರಕಾರಿ ಸಂರಕ್ಷಿತ ಬೇಸಾಯವು ಸಾಕಷ್ಟು ಆದಾಯವನ್ನು ಬೆಳೆಗಾರರಿಗೆ ತಂದರೂ, ನಂತರದ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ಈ ಉದ್ದಿಮೆಯ ಬೆಳವಣಿಗೆ ಹಿಮ್ಮುಖವಾಗುವುದರ ಜೊತೆಗೆ ಇವುಗಳನ್ನು ಅವಲಂಬಿಸಿದವರು ಆರ್ಥಿಕ ತೊಂದರೆಯಿಂದಾಗಿ ಅಂತಹ ಪುಷ್ಪ ಹಾಗೂ ತರಕಾರಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅನೇಕ ಹೈಟೆಕ್ ಸಂರಕ್ಷಿತ ಬೇಸಾಯ ಘಟಕಗಳನ್ನು ಪುನಃಶ್ಚೇತನಗೊಳಿಸಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಂರಕ್ಷಿತ ಬೇಸಾಯದಡಿಯಲ್ಲಿ ಪಾಲಿಥೀನ್ ಶೀಟ್ ಹಾಗೂ ಗಿಡಗಳ ಬದಲಾವಣೆಗೆ ಸಹಾಯಧನ ನೀಡಲಾಗುವುದು.
ಪಾಲಿಥೀನ್ ಶೀಟ್ ಹರಿದು ಹೋಗಿರುವ ರೈತ ಫಲಾನುಭವಿಗಳು ಶೀಟ್ ಹರಿದುಹೋದ ಛಾಯಾಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಆಯಾ ತಾಲ್ಲೂಕಿನ ಅಧಿಕಾರಿಗಳು ಬಂದು ಪರಿಶೀಲಿಸಿ, ನಂತರ ಸಹಾಯಧನಕ್ಕೆ ಪರಿಗಣಿಸಲಾಗುವುದು. ಘಟಕದ ಸಹಾಯಧನ ನೀಡಲಾಗುತ್ತದೆ.
ರೈತರು ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 07 ಕೊನೆ ದಿನವಾಗಿದೆ.
ಘಟಕದ ವಿವರ, ಬೆಳೆಗಳು, ಸಹಾಧನದ ಮೊತ್ತ ಹಾಗೂ ಹೆಚ್ಚಿನ ಮಾಹಿತಿಗಾಗಿ, ಸಂಬಂಧಿಸಿದ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸುವುದು.
ಪಿ.ಮಂಜುಳಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ದೇವನಹಳ್ಳಿ, ಮೊ.ಸಂ.: 9448825101, ಎಂ.ಎಸ್.ದೀಪಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ), ದೊಡ್ಡಬಳ್ಳಾಪುರ, ಮೊ.ಸಂ.: 9880210892, ರೇಖಾ.ಬಿ.ಪಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಹೊಸಕೋಟೆ, ಮೊ.ಸಂ.: 8217210320, ಹರೀಶ್.ಆರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ನೆಲಮಂಗಲ, ಮೊ.ಸಂ.: 9880461607 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರಾದ ಗುಣವಂತ.ಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….