ನವರಾತ್ರಿಯ ಆರನೇ ದಿನ ಜಗನ್ಮಾತೆಯನ್ನು ಕಾತ್ಯಾಯಿನಿ ದೇವಿ ರೂಪದಲ್ಲಿ ಆರಾಧಿಸಲಾಗುತ್ತದೆ.
ತಾಯಿ ಕಾತ್ಯಾಯನಿ ದೇವಿ ನವರಾತ್ರಿಯ ಆರನೇ ದಿನ ಶಕ್ತಿ ಸ್ವರೂಪಿಣಿಯಾದ ತಾಯಿ ಕಾತ್ಯಾಯನಿಗೆ ಅರ್ಪಣೆ. ಈ ದೇವಿಯು ಯುದ್ಧದ ಸಂದರ್ಭಗಳಲ್ಲಿ ಪೂಜಿಸಲ್ಪಡುವ ದೇವತೆಯೂ ಆಗಿದ್ದಾಳೆ. ದೇವಿಯ ಉಗ್ರ ರೂಪಗಳಲ್ಲಿ ಕಾತ್ಯಾಯನಿ ದೇವಿಯು ಅತ್ಯಂತ ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ಸಿಂಹಾರೂಢಳಾಗಿರುವ ತಾಯಿಯು ಒಂದು ಕೈಯ್ಯಲ್ಲಿ ಕತ್ತಿ ಹಿಡಿದಿರುತ್ತಾಳೆ. ಈ ತಾಯಿಯು ಋಷಿ ಕ್ಯಾತ್ಯಾಯನನ ಮಗಳಾಗಿದ್ದಾಳೆ.
ಏನು ನೀಡಬೇಕು: ದೇವಿ ಕಾತ್ಯಾಯನಿಗೆ ಭಕ್ತರು ಜೇನುತುಪ್ಪವನ್ನು ಪ್ರಸಾದವಾಗಿ ಅರ್ಪಿಸಬೇಕು.
ತಾಯಿಯು ಇದೆ ರೂಪದಲ್ಲಿ ಮಹಿಷಾಸುರನನ್ನು ಸಂಹಾರ ಮಾಡಿದಳು. ಕಾತ್ಯಾಯಿನಿ ದೇವಿಯ ಪೂಜೆಯಿಂದ ಋಣಾತ್ಮಕ ಶಕ್ತಿಗಳು ನಿರ್ಮೂಲನೆಯಾಗಿ ಆತ್ಮವಿಶ್ವಾಸ ಲಭಿಸುತ್ತದೆ. ತಾಯಿಯು ಈ ರೂಪದಲ್ಲಿಯೇ ಅಸುರರಾದ ಶುಂಭ ಹಾಗೂ ನಿಶುಂಭರನ್ನು ವಧಿಸಿ, ದೇವಾನು ದೇವತೆಗಳನ್ನು ದೇವಲೋಕಕ್ಕೆ ಮರಳಿ ಕಳುಹಿಸಿದ್ದಳು.
ಸಂಗ್ರಹ ವರದಿ: ಗಣೇಶ್.ಎಸ್.,ದೊಡ್ಡಬಳ್ಳಾಪುರ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….