ಆಕಾಶದೆತ್ತರಕ್ಕೆ ಹಾರುವುದಕ್ಕಿಂತಲೂ ವಿನೀತರಾಗಿರುವುದು ಮುಖ್ಯ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಆಕಾಶದೆತ್ತರಕ್ಕೆ ಹಾರುವುದಕ್ಕಿಂತಲೂ ವಿನೀತರಾಗಿರುವುದು  ಮುಖ್ಯ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಶನಿವಾರ ರಾತ್ರಿ ಸುರೇಶ್ ಬಿ.ಎನ್ ಅವರ ಆತ್ಮಕಥೆ ಆನ್ ಟು ದಿ ರಾಕೆಟ್‍ಶಿಪ್ ಕೃತಿಯನ್ನು ಬಿಡುಗಡೆ ಮಾಡಿ  ಮಾತನಾಡಿದರು.

ಸುರೇಶ್ ಅವರ ಜೀವನದ ಪಯಣವನ್ನು ತಿಳಿಸುವ ಕೃತಿ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ತರುವಂತಿದೆ. ಸಾಧಿಸುವ ಸ್ಫೂರ್ತಿಯುಳ್ಳ, ಅತ್ಯಂತ ವಿನಯಶೀಲ ವ್ಯಕ್ತಿ ಸುರೇಶ್. ವಿನಯಶೀಲರಾಗಿ ಉಳಿಯುವುದು ಬಹಳ ಕಷ್ಟ. ಅದೇ ಒಂದು ಸಾಧನೆ. ಯಶಸ್ಸು  ಸಾಧನೆಯೆಡೆಗಿನ ಪಯಣ. ಕರ್ನಾಟಕ ಮತ್ತು ದೇಶದ ಹೆಮ್ಮೆಯ ಪುತ್ರ ಸುರೇಶ್ ಎಂದರು. ಎಲ್ಲರೂ ಸುರೇಶ್ ಅವರ ಆತ್ಮಕಥೆಯನ್ನು ಓದಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇಸ್ರೋ ಎಂಬ ದೇವಸ್ಥಾನ: ಇಸ್ರೋ ದೇವರ ಬಳಿ ಕೊಂಡೊಯ್ಯುವ ದೇವಸ್ಥಾನವಿದ್ದಂತೆ. ಇಸ್ರೋ ಅನೇಕ ಸ್ಯಾಟಲೈಟ್‍ಗಳನ್ನು ನೀಡಿದೆ. ದೇವರನ್ನು ತಲುಪಲು ಜ್ಞಾನ ಮತ್ತು ಧ್ಯಾನ ಅಗತ್ಯ.  ಇಸ್ರೋದಲ್ಲಿ ಯಶಸ್ಸು ಸಾಧಿಸಲು ಇವೆರಡೂ ಬಹಳ ಮುಖ್ಯ. ವೈಜ್ಞಾನಿಕ ಜ್ಞಾನ ಮತ್ತು ಧ್ಯಾನ ಅಗತ್ಯ.  ವಿಜ್ಞಾನಿಗಳನ್ನು ಕಂಡಾಗ ವ್ಯಕ್ತಿಯಲ್ಲಿ ಹುದುಗಿರುವ ಜ್ಞಾನದ ಭಂಡಾರವನ್ನೇ ಕಂಡಂತಾಗುವುದು. ದೇಶ ಹಾಗೂ ಸಮಾಜದ ಒಳಿತಿಗಾಗಿ  ಜ್ಞಾನವನ್ನು ಉಪಯೋಗಿಸುವವರೇ ಅತ್ಯುತ್ತಮ ವ್ಯಕ್ತಿಗಳು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಪರಿಹಾರವೇ ಗುರಿ: ಸಮಾಜದಲ್ಲಿ ನಿರ್ದಿಷ್ಟವಾಗಿ ಕೆಲವರ ಏಳಿಗೆಯನ್ನು ಗುರಿಯಾಗಿಸಿಕೊಂಡು ಸರ್ಕಾರದ ಕಾರ್ಯಕ್ರಮಗಳನ್ನು  ರೂಪಿಸಲಾಗುತ್ತದೆ. ಅದೇ ರೀತಿ ಸದ್ದಿಲ್ಲದೇ  ಮುಂದಿನ ಪೀಳಿಗೆಗಾಗಿ, ಸಮಸ್ಯೆಗಳನ್ನು ಬಗೆಹರಿಸಲು ಅನೇಕ ವಿಜ್ಞಾನಿಗಳು ಶ್ರಮಿಸುತ್ತಾರೆ. ಇಸ್ರೋದಲ್ಲಿ ಪರಿಹಾರವೇ ಗುರಿ. ಅದೇ ಅದರ ಮೌಲ್ಯ ಕೂಡ. ಕೊಪ್ಪ ತಾಲ್ಲೂಕಿನ ಹೊಸಕೆರೆಯಲ್ಲಿ ಹುಟ್ಟಿದ  ಸುರೇಶ್ ಅವರ ಜೀವನ ಅತ್ಯಂತ ಎತ್ತರಕ್ಕೇ ಏರಿ, ಇಡೀ ಪ್ರಪಂಚವೇ ಕಾಣುವಂತಾಗಿದೆ.  ಎತ್ತರಕ್ಕೆ ಏರಿದಷ್ಟೂ, ನಮ್ಮ ಜೀವನ ಏಕಾಂಗಿಯಾಗುತ್ತದೆ. ಆದರೂ, ಎಲ್ಲರ ಬಗ್ಗೆ ಯೋಚಿಸುವ ಶಕ್ತಿಯನ್ನು ಸುರೇಶ್ ಅವರು ಕಳೆದುಕೊಂಡಿಲ್ಲ.  ಭಾರತೀಯ ಜನರಿಗೆ ಸುರೇಶ್ ಅವರು ಕೊಡುಗೆ ನೀಡಿದ್ದಾರೆ.   ಅವರ ಪುತ್ರ ಸುರೇಶ್ ಅವರನ್ನು ಮಣ್ಣಿನ ಮಗ ಎಂದು ಉಲ್ಲೇಖಿಸಿರುವುದು ಸೂಕ್ತವಾಗಿಯೇ ಇದೆ ಎಂದರು.

ಪರಿಹಾರಗಳನ್ನು ಕಂಡುಕೊಳ್ಳುವ ಪ್ರಾಧಿಕಾರ ರಚನೆ: ಭಾರತೀಯ ವಿಜ್ಞಾನ ಸಂಸ್ಥೆ, ಇಸ್ರೋ, ಸಿ.ಎಫ್.ಟಿ.ಆರ್ ಐ ಮುಂತಾದ ಸಮಸ್ಥೆಗಳನ್ನು ರಾಜ್ಯ ಹೊಂದಿದ್ದು, ಸಂವಾದ ಮಾಡುವ, ಸಮಸ್ಯೆಗಳಿಗೆ ಪರಿಹಾರ ಹುಡುಕುವ, ವೈಜ್ಞಾನಿಕ ಜ್ಞಾನದ ಬಳಕೆಯನ್ನು ಉತ್ತೇಜಿಸುವ ಸಂಸ್ಥೆಯ ಅಗತ್ಯವಿದೆ. ಇಂಥಹ ಪ್ರಾಧಿಕಾರವೊಂದನ್ನು ರಚಿಸಲು  ಸರ್ಕಾರ ಸಿದ್ಧವಿದೆ ಎಂದರು. ಮುಂದಿನ ಪೀಳಿಗೆಯ ನಾವು ಕುರಿತು ಯೋಚಿಸಬೇಕಿದೆ. ನಾಗರಿಕತೆ ಬೆಳೆಯುತ್ತಿದೆ. ಸಂಸ್ಕøತಿ ಅಭಿವೃದ್ಧಿಯಾಗುತ್ತಿಲ್ಲ.  ನಮಗೆ ನಾಗರಿಕತೆ ಮತ್ತು  ಸಂಸ್ಕøತಿಯ ನಡುವಿನ ವ್ಯತ್ಯಾಸದ ಬಗ್ಗೆ ಸ್ಪಷ್ಟತೆ ಇಲ್ಲ. ಸುರೇಶ್ ಅವರಂತೆ ತಮ್ಮ ಅಲುಗಾಡದ ಬೇರುಗಳ ಬಗ್ಗೆ  ಮಾತನಾಡುವವರು ನಮಗೆ ಅಗತ್ಯ.  ಶೀಘ್ರದಲ್ಲಿಯೇ ಇಸ್ರೋ ಮುಂತಾದ  ಕಡೆಗಳಲ್ಲಿ  ಕಾರ್ಯನಿರ್ವಹಿಸುತ್ತಿರುವ, ನಿವೃತ್ತರಾಗಿರುವರನ್ನು ಒಳಗೊಂಡ ಸಂಸ್ಥೆ ರಚಿಸಿ ಅತ್ಯುತ್ತಮ ಕೆಲಸ ಮಾಡಲು ಮುಂದಾಗುವುದಾಗಿ  ಮುಖ್ಯಮಂತ್ರಿಗಳು  ತಿಳಿಸಿದರು.

ಮುಂದಿನ ಪೀಳಿಗೆಗೆ ಕೊಡುಗೆ: ಸಕಾರಾತ್ಮಕ ಕೆಲಸಗಳಿಗಾಗಿ ಮಾನವನ ಹೊಂದಿಕೊಳ್ಳುವ ಗುಣವನ್ನು ಬಳಕೆ ಮಾಡಬೇಕು.  ವಿಜ್ಞಾನಿಗಳು ಈ ಬಗ್ಗೆ ಆಲೋಚಿಸಬೇಕು. ಕೆಲ ವಿಜ್ಞಾನಿಗಳು ಹೊಸ ಯೋಜನೆಗಳನ್ನು ಹೊತ್ತು ತರುತ್ತಾರೆ. ಮಾನವನ ಮೆದುಳಿನ ಶಕ್ತಿಯನ್ನು ಬಳಸಬೇಕು. ಬೆಂಗಳೂರು ಸಂಶೋಧನೆಗಳಿಗೆ ಹೇಳಿ ಮಾಡಿಸಿರುವ ಸ್ಥಳ. ಈ ಮಟ್ಟದಲ್ಲಿ ಬೇರ್ಯಾವ ರಾಜ್ಯವೂ ಯೋಚಿಸಲು ಸಾಧ್ಯವಿಲ್ಲ. ನಮ್ಮ ಪೂರ್ವಜನರಿಗೆ ಇದ್ದ ಮೌಲ್ಯಗಳಿಂದಾಗಿಯೇ ನಾವು ಇಂದು ಇದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ನಾವೇನು ಕೊಡುತ್ತೇವೆ ಎನ್ನುವುದು ಮುಖ್ಯ. ಈ ದಿಕ್ಕಿನತ್ತ ನಾವು ಯೋಚಿಸಬೇಕು ಎಂದರು.

ಸಮಾರಂಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್, ಇಸ್ರೋ ಅಧ್ಯಕ್ಷ ಸೋಮನಾಥನ್,  ನಿಟಕಪೂರ್ವ ಇಸ್ರೋ ಅಧ್ಯಕ್ಷರಾದ  ರಾಧಾಕೃಷ್ಣನ್, ಕಿರಣ್ ಕುಮಾರ್, ಡಿ.ಜಿ ಎ.ಡಿ.ಎ, ಡಿ.ಆರ್.ಡಿ.ಒ ಡಾ: ಗಿರೀಶ್ ದೇವಗಲ್, ಡಾ:ಕೆ.ಎಸ್. ಶಿವಂ, ಸುನೀಲ್ ಸುರೇಶ್, ಡಾ;ಬಿ.ಎನ್.ಸುರೇಶ್ ಉಪಸ್ಥಿತರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ದೊಡ್ಡಬಳ್ಳಾಪುರದಲ್ಲಿ JDS ಪ್ರತಿಭಟನೆ..!: ಕಾಂಗ್ರೆಸ್ ವಿರುದ್ಧ ಹರೀಶ್ ಗೌಡ ವಾಗ್ದಾಳಿ

ದೊಡ್ಡಬಳ್ಳಾಪುರದಲ್ಲಿ JDS ಪ್ರತಿಭಟನೆ..!: ಕಾಂಗ್ರೆಸ್ ವಿರುದ್ಧ ಹರೀಶ್ ಗೌಡ ವಾಗ್ದಾಳಿ

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಲು ಅವಕಾಶ ಕೊಡದ ಕಾಂಗ್ರೆಸ್, ಮಹಿಳಾ ವಿರೋಧಿ ಎಂಬುದು ಸಾಬೀತು ಮಾಡಿದೆ ಎಂದು ಜೆಡಿಎಸ್ (JDS) ಹಿರಿಯ ಮುಖಂಡ ಹರೀಶ್

[ccc_my_favorite_select_button post_id="121251"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಝಾಂಬಿ ಡ್ರಗ್ಸ್ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯ ವಿಡಿಯೊ ಶೇರ್ ಮಾಡಿದ್ದ ನಟ ದುನಿಯಾ ವಿಜಯ್‌ಗೆ (Duniya Vijay) ಸಂಕಷ್ಟ ಎದುರಾಗಿದೆ.

[ccc_my_favorite_select_button post_id="121217"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!