ಚೆನೈ: ಇಲ್ಲಿನ ಚೆನೈ ಟ್ರೇಡ್ ಸೆಂಟರ್ ನಲ್ಲಿ ಆಯೋಜಿಸಿದ್ದ ಬ್ರೈನೋಬ್ರೈನ್ ಫೆಸ್ಟ್ 2022 ರಾಷ್ಟ್ರೀಯ ಸ್ಪರ್ಧೆಯಲ್ಲಿ, ದೊಡ್ಡಬಳ್ಳಾಪುರದ ಬ್ರೈನೋಬ್ರೈನ್ ತರಬೇತಿ ಕೇಂದ್ರದ 25 ಮಂದಿ ವಿದ್ಯಾರ್ಥಿಗಳು ತರಬೇತುದಾರರಾದ ವಿ.ಎ.ಪುಷ್ಪ ನೇತೃತ್ವದಲ್ಲಿ ಭಾಗವಹಿಸಿದ್ದು, ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವಿವಿಧ ರೀತಿಯ ಲೆಕ್ಕಗಳನ್ನು ಮಾಡುವ ಮೂಲಕ 08 ಚಾಂಪಿಯನ್ ಮಂದಿ ಆಗಿ ಹೊರಹೊಮ್ಮಿದ್ದರೆ, 15 ಸ್ಪರ್ಧಿಗಳು ಚಿನ್ನ, ಇಬ್ಬರು ಸ್ಪರ್ಧಿಗಳು ಬೆಳ್ಳಿ ಪದಕದವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಚೆನೈ ಟ್ರೇಡ್ ಸೆಂಟರ್ ನಲ್ಲಿ ಆಯೋಜಿಸಿದ್ದ ಬ್ರೈನೋಬ್ರೈನ್ ಫೆಸ್ಟ್ 2022 ರಾಷ್ಟ್ರೀಯ ಸ್ಪರ್ಧೆಯಲ್ಲಿ, ವಿವಿಧ ರಾಜ್ಯಗಳ ಏಳು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎರಡು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯನ್ನು ಸಂಸ್ಥೆ ಮುಖ್ಯ ವ್ಯವಸ್ಥಾಪಕ ಆನಂದ್ ಸುಬ್ರಮಣ್ಯಂ ಅವರು ಉದ್ಘಾಟಿಸಿದರು. ಮೂರು ನಿಮಿಷಗಳಲ್ಲಿ 60 ವಿವಿಧ ರೀತಿ ಮನೋ ಗಣಿತ ಲೆಕ್ಕಗಳನ್ನು ಮಾಡುವ ಮೂಲಕ ಬ್ರೈನೋಬ್ರೈನ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.
ಇದೇ ವೇಳೆ ದೊಡ್ಡಬಳ್ಳಾಪುರದ ಅಬಾಕಸ್ ತರಬೇತಿ ಕೇಂದ್ರಕ್ಕೆ ಬೆಸ್ಟ್ ಫ್ಯಾಕಲ್ಟಿ ಅವಾರ್ಡ್, ಬೆಸ್ಟ್ ಫ್ರಾಂಚೈಸಿ ಅವಾರ್ಡ್ ಅನ್ನು ನೀಡಲಾಗಿದ್ದು, ಮುಖ್ಯಸ್ಥರಾದ ವಿ.ಎ.ಪುಷ್ಪ ಸ್ವೀಕರಿಸಿದರು.
ವಿಜೇತರಿಗೆ ಬ್ರೈನೋ ಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಳ್ ಸುಬ್ರಹ್ಮಣ್ಯಂ ಟ್ರೋಫಿ, ಪದಕಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಬ್ರೈನೋ ಬ್ರೈನ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ನೀಲ್ ಕಮಲ್ ಸೇರಿದಂತೆ ವಿವಿಧ ರಾಜ್ಯಗಳ ತರಬೇತಿ ಕೇಂದ್ರದ ಮುಖ್ಯಸ್ಥರು ಭಾಗವಹಿಸಿದ್ದರು.
ಚಾಂಪಿಯನ್ಸ್: ಆರ್.ಐಶ್ವರ್ಯ, ಪಿ.ಇಂಚರ, ಎನ್.ಮನಿಶಾ, ಜಿ.ನೇಹಿತಾ, ಎಸ್.ಆರ್.ಪುನಂ ಸಾಯಿ ರಾಂ, ಕೆ.ಎಸ್.ಸಂಪ್ರೀತ್ ರಾಜ್, ಎನ್.ಶ್ರೇಯ, ಪಿ.ಸೃಜನ್.
ಚಿನ್ನದ ಪದಕ: ಬಿ.ಎ.ಜಯಂತಿ ರೆಡ್ಡಿ, ಇ.ಭುವನ್, ಸಿ.ಎಸ್.ಧಕ್ಷಿತಾ, ಜಿ.ಎಸ್.ಪೇಕ್ಷಿತ್, ಎ.ಗನ್ಯ, ಆರ್.ಹರ್ಷ, ಎ.ಜೀವನ್, ಆರ್.ಪವನ್, ಎಂ.ಪ್ರಾರ್ಥನಾ, ಜೆ.ಹೆಚ್.ಪುನೀತ್, ಎಸ್.ಪೂರ್ವಿತ್, ಆರ್.ರೋಹನ್ ಚಂದ್ರ, ಎಲ್. ಸೌಜನ್ಯ, ಸುಪ್ರಿಯ ಕುಮಾರಿ, ಹೆಚ್.ಡಿ.ಉನ್ನತಿ.
ಬೆಳ್ಳಿ ಪದಕ: ಎಲ್.ಅಮಿತ್, ಎಸ್.ಗಗನ್ ದೀಪ್.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

