ದೊಡ್ಡಬಳ್ಳಾಪುರ: ಆಳುವ ಸರ್ಕಾರಗಳು ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಆಡಳಿತದಲ್ಲಿ ಕನ್ನಡದ ಅನುಷ್ಟಾನ ಹಿನ್ನಡೆಯಾಗುತ್ತಿದೆ. ಈ ದಿಸೆಯಲ್ಲಿ ಕನ್ನಡ ಭಾಷೆಯ ಕಡ್ಡಾಯ ಹಾಗೂ ಅನುಷ್ಟಾನಕ್ಕೆ ಸರ್ಕಾರಗಳು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಡಾ.ರಾಜಕುಮಾರ್ ಕಲಾಮಂದಿರದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳ ಮೂಲಕ ಎಲ್ಲೆಡೆ ಕನ್ನಡದ ವಾತಾವರಣ ನಿರ್ಮಾಣಕ್ಕೆ ಪೂರಕವಾಗಬೇಕು. ಕನ್ನಡ ನಾಡು ನುಡಿ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕಟಿಬದ್ದರಾಗಬೇಕು ಎಂದರು.
ಉಪವಿಭಾಗಾಧಿಕಾರಿ ಎನ್.ತೇಜಸ್ ಕುಮಾರ್ ಮಾತನಾಡಿ, ಇಂದಿನ ಪೀಳಿಗೆಗೆ ಕನ್ನಡ ಭಾಷೆ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸಬೇಕಾದ ಅಗತ್ಯವಿದೆ. ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದು, ನಾಡಿನ ಹೆಮ್ಮೆಯ ಕವಿಗಳ ಸಾಹಿತ್ಯವನ್ನು ಪರಿಚಯಿಸಬೇಕಿದೆ ಎಂದರು.
ಉಪನ್ಯಾಸಕ ಕೆ.ಎಚ್.ಪ್ರವೀಣ್ ಮಾತನಾಡಿ, ಕನ್ನಡದ ಕನ್ನಡದ ಅನನ್ಯತೆಯ ಬಗ್ಗೆ ಹೆಮ್ಮೆ ಪಡುವ ನಾವು ಇಂದು ಒಕ್ಕೂಟ ವ್ಯವಸ್ಥೆಯಲ್ಲಿ ಬಲವಂತದ ಹಿಂದಿ ಹೇರಿಕೆಗೆ ಒಳಗಾಗುತ್ತಿದ್ದೇವೆ. ಮಾತೃಭಾಷಾ ಶಿಕ್ಷಣ ಪ್ರಭಾವಶಾಲಿಯಾಗಿದ್ದು, ಕನ್ನಡ ಬದುಕಾದಾಗ ಮಾತ್ರ ಭಾಷೆಯ ಜೀವಂತಿಕೆ ಸಾಧ್ಯ ಎಂದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಿ.ಪಿ.ಆಂಜನೇಯ (ಕನ್ನಡ ಕಟ್ಟಾಳು), ರಾ.ಬೈರೇಗೌಡ (ಪ್ರಗತಿಪರ ರೈತರು, ವಕೀಲರು), ಕೆ.ನರಸಿಂಹಯ್ಯ(ನಾಟಕ), ಆರ್. ರಾಜಣ್ಣ(ರಂಗಭೂಮಿ), ಹನುಮಂತ ರೆಡ್ಡಿ (ಕನ್ನಡಪರ ಹೋರಾಟ), ಡಾ.ಹರೀಶ್ (ವೈದ್ಯಕೀಯ-ನೇತ್ರದಾನ ಜಾಗೃತಿ), ಚಿನ್ನುಪ್ರಕಾಶ್ (ಸಾಹಿತ್ಯ), ರಾಮಮೂರ್ತಿ (ಯಕ್ಷಗಾನ), ಯುಕ್ತಿ ರಾಜಣ್ಣ (ಏರ್‍ರೈಫಲ್-ಕ್ರೀಡೆ) ಗಣ್ಯರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷೆ ಫರ್ಹಾನಾ ತಾಜ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ಮೋಹನ ಕುಮಾರಿ, ರಾಜ್ಯ ರೇಷ್ಮೆ ಮಂಡಲಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ, ತಾ.ಪಂ ಇಒ ಶ್ರೀನಾಥ್ ಗೌಡ, ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಕ್ಷೇತ್ರಶಿಕ್ಷಣಾಧಿಕಾರಿ ಆರ್.ರಂಗಪ್ಪ ಸೇರಿದಂತೆ ನಗರಸಭಾ ಸದಸ್ಯರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಕಾರ್ಯಕರ್ತರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
