ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ಶಾಲೆಯಾದ ಎಂ.ಎಸ್.ವಿ ಪಬ್ಲಿಕ್ ಶಾಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಪತ್ರಕರ್ತ ಎಸ್.ಪಿ.ಗುರುಪ್ರಸಾದ್ ಭಾಗವಹಿಸಿದ್ದರು.

ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, “ಕನ್ನಡ ನಾಡು ಪುಣ್ಯದ ಬೀಡು. ಅತ್ಯಂತ ಸಂಪದ್ಭರಿತ ನಾಡು ನಮ್ಮದಾಗಿದೆ. ಕನ್ನಡ ಸಕಲ ಕಲೆ, ಸಾಹಿತ್ಯ, ಸಂಗೀತ ಸಂಸ್ಕೃತಿಗೆ ತವರಾಗಿದೆ. ಕರ್ನಾಟಕದ ಏಕೀಕರಣ ಹೊರಾಟವನ್ನು ಯಾರೂ ಮರೆಯುವಂತಿಲ್ಲ. ಹಲವು ಮಹನೀಯರ ಶ್ರಮದ ಫಲವಾಗಿ ಕರ್ನಾಟಕದ ಉದಯವಾಯಿತು. ಈ ನಿಟ್ಟಿನಲ್ಲಿ ನಾವು ಕನ್ನಡ ನಾಡು, ನುಡಿಯನ್ನು ಉಳಿಸಿಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ಪತ್ರಕರ್ತ ಗುರುಪ್ರಸಾದ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಒಂದು ದಿನದ ಉತ್ಸವವಲ್ಲ ಅದು ನಿತ್ಯೋತ್ಸವವಾಗಬೇಕು. ಶಿಕ್ಷಣ ಆರೋಗ್ಯ, ಉದ್ಯೋಗದ ಜೊತೆ ಭಾರತದ ಭವಿಷ್ಯವನ್ನು ನಿರ್ಮಾಣ ಮಾಡುವ ಶಕ್ತಿ ಕರ್ನಾಟಕಕ್ಕೆ ಇದೆ. ಆಂಗ್ಲ ಭಾಷೆಯ ಅಗತ್ಯತೆಯ ಜೊತೆಯಲ್ಲೇ ನಮ್ಮತನವನ್ನು ಉಳಿಸಿ ಬೆಳೆಸುವ ಕಾಯಕ ನಮ್ಮದಾಗಬೇಕು” ಎಂದು ತಿಳಿಸಿದರು.
ಶಾಲಾ ಸಂಸ್ಥಾಪಕ ಎ.ಸುಬ್ರಮಣ್ಯ ಮಾತನಾಡಿ, ಪ್ರತಿ ವರ್ಷ ರಾಜ್ಯೋತ್ಸವ ಹಬ್ಬ ರೀತಿ ವಾತಾವರಣ ಮಾಡುವುದರ ಜೊತೆಗೆ ಕನ್ನಡ ಭಾಷೆ, ಉಳಿಸಿ ನಾಡು ನುಡಿಗೆ ಶ್ರಮಿಸಬೇಕಾಗಿದೆ. ಕನಸು ಬೀಳುವುದು ಕನ್ನಡದಲ್ಲೇ ಆದ್ದರಿಂದ ನಾವು ಕನ್ನಡ ಹೃದಯದಲ್ಲಿ ಇಟ್ಟು ಕೊಂಡಿದ್ದೇವೆ.
ರಾಜ್ಯೋತ್ಸವ ಕೇವಲ ನವೆಂಬರ್ 1ರ ಸಡಗರವಾಗಬಾರದು, ಪ್ರತಿ ದಿನ ಪ್ರತಿ ಘಳಿಗೆ ನಮ್ಮ ತನವ ನಾವು ಬಿಡಬಾರದು, ಎಲ್ಲಾ ಭಾಷೆಗೂ ಗೌರವ ನೀಡುತ್ತಾ ನಮ್ಮ ಭಾಷೆಯನ್ನು ಉಳಿಸಿ ಬೆಳೆಸೋಣ. ನಮ್ಮ ರಾಜ್ಯ ಇಂದು ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆಯುತ್ತಿದೆ. ಈ ರಾಜ್ಯದಲ್ಲಿ ಜನಿಸಿರುವ ನಾವೆಲ್ಲರೂ ಧನ್ಯ” ಎಂದರು.
ರಾಜ್ಯೋತ್ಸವದ ಅಂಗವಾಗಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಕರುನಾಡಿನ ನೆಲದ ಸಂಸ್ಕೃತಿಯ ಕುರುಹಾದ ವೀರಗಾಸೆ, ಕಂಸಾಳೆ, ಕೋಲಾಟ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್.ಎಸ್, ಪ್ರಾಂಶುಪಾಲರಾದ ರೆಮ್ಯ.ಬಿ.ವಿ ಸೇರಿದಂತೆ ಶಾಲಾ ಸಿಬ್ಬಂದಿವರ್ಗ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
